Uncategorized

ನಂದಿ – ಕ್ರೀಡಾ ಪ್ರೋತ್ಸಾಹ ಪ್ರಶಸ್ತಿ ಅರ್ಜಿ ಆಹ್ವಾನ

ಮೈಸೂರು,ಏ.25 : ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥಯಿಂದ 2018-19ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜಿಲ್ಲೆಯ 14,16,18,20 ವಯೋಮಿತಿ ಇರುವ ಕ್ರೀಡಾಪಟುಗಳು ‘ನಂದಿ’ ಹಾಗೂ ಕ್ರೀಡಾ ಪ್ರೋತ್ಸಾಹಕರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ನಂದಿ ಪ್ರಶಸ್ತಿಗೆ ಕರ್ನಾಟಕ ಅರ್ಥೆಟಿಕ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಿರುವ ಕ್ರೀಡಾಕೂಟದಲ್ಲಿ, ಅಥವಾ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸುವ ಅಥ್ಲೆಟಿಕ್ಸ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿರಬೇಕು, ಅಥವಾ ವಿವಿಯನ್ನು ಸ್ಪರ್ಧಿಸಿ ಉತ್ತಮ ಸಾಧನೆ ಮೆರೆದ ಕ್ರೀಡಾಪಟುವನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು.

ಆಸಕ್ತ ಕ್ರೀಡಾಪಟುಗಳು ಸಾಧನೆಗೈದಿರುವ ಕ್ರೀಡಾ ಪ್ರಶಸ್ತಿ ಪತ್ರ ಪ್ರತಿಯನ್ನು , ವೈಯುಕ್ತಿಕ ವಿವರಗಳನ್ನು ಬಿ.ಶ್ರೀಕಾಂತ್, ಕಾರ್ಯದರ್ಶಿ ಎಂ.ಡಿ.ಎ.ಎ., ನಂ. 627/ಸಿ, ನ್ಯೂ ಕಾಂತರಾಜ ಅರಸು ರಸ್ತೆ, ಕುವೆಂಪುನಗರ, ಮೈಸೂರು-570023 ಇಲ್ಲಿಗೆ, ಇಮೇಲ್ mdaa,[email protected] ಇಲ್ಲಿ ಸಂಪರ್ಕಿಸಬಹುದೆಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: