ಕ್ರೀಡೆ

ಏಷ್ಯನ್‌ ಬ್ಯಾಡ್ಮಿಂಟನ್‌: ಸೈನಾ, ಸಿಂಧು, ಸಮೀರ್ ವರ್ಮಾ ಕ್ವಾರ್ಟರ್ ಫೈನಲ್ ಗೆ

ವುಹಾನ್‌,(ಚೀನಾ)-ಏಷ್ಯನ್ಬ್ಯಾಡ್ಮಿಂಟನ್ಚಾಂಪಿಯನ್ಶಿಪ್ನಲ್ಲಿ ಭಾರತದ ತಾರಾ ಶಟ್ಲರ್ಗಳಾದ ಸೈನಾ ನೆಹ್ವಾಲ್ಹಾಗೂ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ, ಕೊರಿಯಾದ ಕಿಮ್ಗಾ ಯುನ್ವಿರುದ್ಧ 21-13, 21-13 ನೇರ ಗೇಮ್ಗಳಲ್ಲಿ ಜಯಗಳಿಸಿದರು. ಕ್ವಾರ್ಟರ್ಫೈನಲ್ನಲ್ಲಿ ಸೈನಾಗೆ ಕಠಿಣ ಸವಾಲು ಎದುರಾಗಲಿದೆ. 3ನೇ ಶ್ರೇಯಾಂಕಿತೆ ಜಪಾನ್ ಅಕಾನೆ ಯಮಗುಚಿ ವಿರುದ್ಧ ವಿಶ್ವ ನಂ.9 ಆಟಗಾರ್ತಿ ಸೆಣಸಲಿದ್ದಾರೆ.

ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಪಿ.ವಿ.ಸಿಂಧು, ಇಂಡೋನೇಷ್ಯಾದ ಚೊಯುರುನ್ನಿಸಾ ವಿರುದ್ಧ 21-15, 21-19 ಗೇಮ್ಗಳಲ್ಲಿ ಜಯಗಳಿಸಿದರು. ವಿಶ್ವ ನಂ.6 ಸಿಂಧು, ಕ್ವಾರ್ಟರ್ಫೈನಲ್ನಲ್ಲಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಕೇ ಯಾನ್ಯಾನ್ವಿರುದ್ಧ ಆಡಲಿದ್ದಾರೆ.

ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಮೀರ್ವರ್ಮಾ, ಹಾಂಕಾಂಗ್ ಲಾಂಗ್ಕಾ ಅಂಗುಸ್ವಿರುದ್ಧ 21-12, 21-19 ಗೇಮ್ಗಳಲ್ಲಿ ಜಯಗಳಿಸಿದರು. ಕ್ವಾರ್ಟರ್ಫೈನಲ್ನಲ್ಲಿ ಸಮೀರ್ಗೆ 2ನೇ ಶ್ರೇಯಾಂಕಿತ ಚೀನಾದ ಶಿ ಯುಕಿಯಿಂದ ಕಠಿಣ ಸವಾಲು ಎದುರಾಗಲಿದೆ. (ಎಂ.ಎನ್)

Leave a Reply

comments

Related Articles

error: