ಕರ್ನಾಟಕ

ಉತ್ಕೃಷ್ಟ ಗುಣಮಟ್ಟದ ಕಾಫಿ ಸ್ಪರ್ಧೆ: ಫ್ಲೇವರ್ ಆಫ್ ಇಂಡಿಯ – ದಿ ಫೈನ್ ಕಪ್ ಅವಾರ್ಡ್

ಹಾಸನ (ಏ.26): ಫ್ಲೇವರ್ ಆಫ್ ಇಂಡಿಯ – ದಿ ಫೈನ್ ಕಪ್ ಅವಾರ್ಡ್ ಕಪ್ಪಿಂಗ್ ಸ್ಪರ್ಧೆ ಹಾಸನ ಏ.25: ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯು ಉತ್ಕøಷ್ಟ  ಗುಣಮಟ್ಟವುಳ್ಳ ಕಾಫಿ ಉತ್ಪಾದನೆಯನ್ನು ಉತ್ತೇಜಿಸಲು “ಫ್ಲೇವರ್ ಆಫ್ ಇಂಡಿಯ – ದಿ ಫೈನ್ ಕಪ್ ಅವಾರ್ಡ್” ಕಪ್ಪಿಂಗ್ ಕಾಂಪಿಟಿಶನ್ 2019” ಸ್ಪರ್ಧೆಯನ್ನು ಏರ್ಪಡಿಸಿದೆ.

ಈ ಸ್ಪರ್ಧೆಯು 1) ಅರೇಬಿಕಾ ಕಾಫಿ 2) ರೋಬಸ್ಟ ಕಾಫಿ ಮಾದರಿಗಳಿಗೆ ಅನ್ವಯಿಸುತ್ತದೆ. ಅರೇಬಿಕಾ ಕಾಫಿ ಮತ್ತು ರೋಬಸ್ಟಾ ಕಾಫಿ ಮಾದರಿಗಳನ್ನು ಅಧಿಕೃತ ವೃತ್ತಿಪರ ಆಡಿಟ್ ಏಜೆನ್ಸಿ ಮೂಲಕ ಸ್ವೀಕರಿಸಲು 29-04-2019 ರವರೆಗೆ ನಿಗದಿಪಡಿಸಲಾಗಿದೆ.

ಆಸಕ್ತ ಕಾಫಿ ಬೆಳೆಗಾರರು ಚಿಕ್ಕಮಗಳೂರಿನ ಚಾಮುಂಡಿ ಕಾಫಿ ಕ್ಯೂರಿಂಗ್ ವರ್ಕ್ಸ್‍ನಲ್ಲಿರುವ ಅಧಿಕೃತ ವೃತ್ತಿಪರ ಆಡಿಟ್ ಏಜೆನ್ಸಿ ರವರಿಗೆ ಕಾಫಿ ಮಾದರಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವಿಭಾಗ ಮುಖ್ಯಸ್ಥರು, (ಕಾಫಿ ಗುಣಮಟ್ಟ), ಕಾಫಿ ಮಂಡಳಿ, ಬೆಂಗಳೂರು ಹಾಗೂ ವೃತ್ತಿಪರ ಆಡಿಟ್ ಏಜೆನ್ಸಿ, ಸಾಯಿಶ್ರೀ ಎಂಟರ್‍ಪ್ರೈಸಸ್, ಬೆಂಗಳೂರು, ಮೊಬೈಲ್ ನಂ. 9845069506/9845013935 ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: