
ಮೈಸೂರು
ಮೈಸೂರು ಮೃಗಾಲಯದ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ
ಮೈಸೂರು,ಏ.26:- ಮೈಸೂರು ಮೃಗಾಲಯದ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಹಲವರು ನಿಗದಿತ ಶುಲ್ಕ ಪಾವತಿಸಿ ಒಂದು ವರ್ಷದ ಅವಧಿಗೆ ಪ್ರಾಣಿ-ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.
ಅನುಪಮ ಗೋಪಾಲ್ ಮತ್ತು ಗೋಪಾಲ್ ರಾಮನಾಥನ್ ಚೆನ್ನೈ ಇವರು 17,500ರೂ ಪಾವತಿಸಿ ಬ್ಲಾಕ್ ಬಕ್ ಮತ್ತು ಲಯನ್ ಟೈಲಡ್ ಲೆಮುರ್, ಬಿ.ಯಶಸ್ವಿನಿ ಮೈಸೂರು 2,000ರೂ ಪಾವತಿಸಿ ನಾಗರಹಾವು, ಪಿ.ಗುರುಶಂಕರ್ ಮೈಸೂರು 2,000ರೂ ಪಾವತಿಸಿ ರೊಸ್ ರಿಂಗಡ್ ಪ್ಯಾರ್ ಕಿಟ್, ಕೃಷಿ ಪರೇಶ್ ಷಾ ಮುಂಬೈ 3,500ರೂ ಪಾವತಿಸಿ ಗೂಬೆ, ಲಕ್ಷ್ಮಿಪತಿ ಬಿ.ಜೆ, 1,000ರೂ ಪಾವತಿಸಿ ಕೇರೆ ಹಾವು, ನಿಜೇಶ್ ಷಾ ಮುಂಬೈ 6,500ರೂ.ಪಾವತಿಸಿ ಲವ್ ಬರ್ಡ್, ನಾಗರಹಾವು, ಕಾಳಿಂಗ ಸರ್ಪ, ಶೈನಜ್ಞ ಮೈಸೂರು 5,000ರೂ ಪಾವತಿಸಿ ಲೆಪರ್ಡ್ ಕ್ಯಾಟ್, ಧೃತಿ ಕೆ.ಆರ್.ಮೈಸೂರು 5,000ರೂ ಪಾವತಿಸಿ ನಾಲ್ಕು ಕೊಂಬಿನ ಜಿಂಕೆಯನ್ನು ದತ್ತು ಸ್ವೀಕರಿಸಿದ್ದಾರೆ.
ಇವರ ಈ ಮಹತ್ಕಾರ್ಯಕ್ಕೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ. (ಎಸ್.ಎಚ್)