
ಮನರಂಜನೆ
`ರಂಗನಾಯಕಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್
ಬೆಂಗಳೂರು,ಏ.26- ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ರಂಗನಾಯಕಿ‘ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಸಿನಿಮಾದ ಪೋಸ್ಟರ್ ಚಿತ್ರದ ಕಥೆ ಬಗ್ಗೆ ಕುತೂಹಲ ಹುಟ್ಟಿಸಿದೆ. ಅದಿತಿ ಪ್ರಭುದೇವ ಸಿನಿಮಾದ ನಾಯಕಿಯಾಗಿದ್ದಾರೆ. ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ನೋಡುತ್ತಿದ್ದರೆ, ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇರುವುದು ತಿಳಿಯುತ್ತದೆ.
ಮತ್ತೊಂದು ಕಡೆ ಸಿನಿಮಾದ ಸಬ್ ಟೈಟಲ್ ‘ವಾಲ್ಯೂಮ್ 1-ವರ್ಜಿನಿಟಿ‘ ಎಂದು ಇರುವುದು ಚರ್ಚೆಗೆ ಕಾರಣವಾಗಿದೆ. ಎಸ್.ವಿ.ನಾರಾಯಣ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಬಿ.ರಾಕೇಶ್ ಸಿನಿಮಾಟೋಗ್ರಾಫಿ, ಮಣಿಕಾಂತ್ ಕದ್ರಿ ಮ್ಯೂಸಿಕ್ ಸಿನಿಮಾದಲ್ಲಿ ಇರಲಿದೆ. ‘ರಂಗನಾಯಕಿ‘ ಸಿನಿಮಾದಲ್ಲಿ ಅದಿತಿ ಪ್ರಭುದೇವ, ಶ್ರೀನಿ ಹಾಗೂ ತ್ರಿವಿಕ್ರಮ್ ನಟಿಸಿದ್ದಾರೆ.
‘ಹಗ್ಗದ ಕೊನೆ‘, ‘ಆಕ್ಟರ್‘, ‘ಆ ಕರಾಳ ರಾತ್ರಿ‘, ‘ಪುಟ 109” ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡುತ್ತಿರುವ ದಯಾಳ್ ಈಗ ರಂಗನಾಯಕಿ ಕಥೆ ಹೇಳುತ್ತಿದ್ದಾರೆ. (ಎಂ.ಎನ್)