ಕರ್ನಾಟಕಮೈಸೂರು

ಅಕ್ಟೋಬರ್ 4-6: ರೈತ ದಸರಾದಲ್ಲಿ ವಿವಿಧ ಗ್ರಾಮೀಣಕ್ರೀಡಾ ಸ್ಪರ್ಧೆ

ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ 3 ದಿನಗಳ  ರೈತ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಮತ್ತು ಕಾರ್ಯಾಧ್ಯಕ್ಷರಾದ ಕೆ.ಎಂ ಸೋಮಸುಂದ್ರ ಹೇಳಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಈ  ವರ್ಷದ  ರೈತ ದಸರಾ ತುಂಬಾ ಸರಳವಾಗಿದ್ದು, ಪ್ರತಿ ತಾಲೂಕಿನಲ್ಲಿ ನಡೆಯುತ್ತಿದ್ದ ಸಭಾ ಕಾರ್ಯಕ್ರಮಗಳನ್ನು ಈ ಬಾರಿ ನಿಲ್ಲಿಸಿದ್ದೇವೆ. ಬದಲಾಗಿ ರೈತರ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ” ಎಂದು ಹೇಳಿದರು.

ಅ. 2 ಮತ್ತು 3 ರಂದು ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಅ. 4 ರಿಂದ 6 ರವರೆಗೆ ರೈತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

ರೈತ ದಸರಾ ಉದ್ಘಾಟನೆ – ಅಕ್ಟೋಬರ್ 4

ಅ.4 ರ ಬೆಳಗ್ಗೆ 9.30 ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೆ.ಕೆ. ಗ್ರೌಂಡ್ ಮೈದಾನಕ್ಕೆ ಮೆರವಣಿಗೆ ಹೊರಟು, ಜಿಲ್ಲಾ ಉಸ್ತುವಾರಿ ಸಚಿವರಿಂದ ರೈತ ದಸರಾ ಮೆರವಣಿಗೆ ಉದ್ಘಾಟನೆ ಮಾಡಲಾಗುತ್ತದೆ.

ಬೆಳಗ್ಗೆ 11.30 : ವಸ್ತು ಪ್ರದರ್ಶನ ಉದ್ಘಾಟನೆ (ಜೆ.ಕೆ ಗ್ರೌಂಡ್)-ಸಿರಿಧಾನ್ಯಗಳ ಪ್ರದರ್ಶನ – ಕೃಷಿ ಸಚಿವರಿಂದ ಉದ್ಘಾಟನೆ.

ಬೆಳಗ್ಗೆ 11.45 : ರೈತ ದಸರಾ ಕಾರ್ಯಕ್ರಮಗಳ ಉದ್ಘಾಟನೆ (ಜೆ.ಕೆ. ಗ್ರೌಂಡ್, ಅಲ್ಯೂಮಿನಿ ಕಟ್ಟಡ).

ಮಧ್ಯಾಹ್ನ 3.00 : ರೈತರೊಡನೆ ಸಂವಾದ – ಕೃಷಿ ವಿಜ್ಞಾನಿಗಳಿಂದ ‘ಸುಸ್ಥಿರ ಕೃಷಿ ಅಭಿವೃದ್ಧಿ’ಯ ಬಗ್ಗೆ ವಿಚಾರ ಸಂಕಿರಣ.

ಕೃಷಿಯಲ್ಲಿ ಸಾಧನೆಗೈದಿರುವ 20 ರೈತರಿಗೆ ಸನ್ಮಾನ ಕಾರ್ಯಕ್ರಮ.

ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆಯ ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

 

ರೈತ ದಸರಾ ಕ್ರೀಡಾ ಕೂಟ – ಅಕ್ಟೋಬರ್ 5

ಅಂದು ರೈತರಿಗೋಸ್ಕರ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.

ಬೆಳಗ್ಗೆ 9.00: ರೈತರಿಗೆ ಕೆಸರು ಗದ್ದೆ ಓಡುವ ಸ್ಪರ್ಧೆ (ನಾಗೇನಹಳ್ಳಿ).

ಬೆಳಗ್ಗೆ 11.30: ರೈತರಿಗೆ ಗುಂಡು ಎತ್ತುವ ಸ್ಪರ್ಧೆ (ಜೆ.ಕೆ.ಗ್ರೌಂಡ್ಸ್).

ಮಧ್ಯಾಹ್ನ 12.30: ರೈತರಿಗೆ 50 ಕೆ.ಜಿ. ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ (ಜೆ.ಕೆ.ಗ್ರೌಂಡ್).

ಮಧ್ಯಾಹ್ನ 1.00: ರೈತ ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ಮತ್ತು ಚಮಚದಲ್ಲಿ ನಿಂಬೆಹಣ್ಣು ಇಟ್ಟು ಓಡುವ ಸ್ಪರ್ಧೆ (ಜೆ.ಕೆ.ಗ್ರೌಂಡ್).

 

ರೈತ ದಸರಾ ಕ್ರೀಡಾಕೂಟ – ಅಕ್ಟೋಬರ್ 6

ಗೋಪಾಲಕರ ಸಂಘದ ಸಹಯೋಗದೊಂದಿಗೆ ಪಶು ಸಂಗೋಪನಾ ರೈತರಿಗೆ ಅಂದು ಸಂಜೆ 6.30 ಕ್ಕೆ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪಶುಸಂಗೋಪನಾ ಸಚಿವರು ಬಹುಮಾನ ವಿತರಿಸಲಿದ್ದಾರೆ ಎಂದು ತಿಳಿಸಿದರು.

ಅಲ್ಲದೇ ರೈತ ದಸರಾ ಜೊತೆಗೆ ಗ್ರಾಮೀಣ ದಸರಾ ಎಂಬ ಪರಿಕಲ್ಪನೆಯನ್ನು ಸೇರಿಸಿಕೊಳ್ಳಲಾಗಿದೆ ಎಂದೂ ಸಹ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತದಸರಾ ಉಪಸಮಿತಿಯ ಉಪ ವಿಶೇಷಾಧಿಕಾರಿಗಳಾದ ಪಿ.ಶಿವಶಂಕರ್ ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಡಾ. ಪಿ.ಎಂ. ಪ್ರಸಾದ್ ಮೂರ್ತಿ ಹಾಜರಿದ್ದರು.

Leave a Reply

comments

Related Articles

error: