ಸುದ್ದಿ ಸಂಕ್ಷಿಪ್ತ

ಮೇ.9ರಿಂದ ಜೆಎಸ್ಎಸ್ ನಿಂದ ಶಿಕ್ಷಕರ ಶಿಬಿರ

ಮೈಸೂರು,ಏ.26 : ಜೆಎಸ್ಎಸ್ ವಿದ್ಯಾಪೀಠ ಹಾಗೂ ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಮೇ.9 ರಿಂದ 11ರವರೆಗೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಶಿಕ್ಷಕರ ಶಿಬಿರವನ್ನು ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಮಕ್ಕಳಲ್ಲಿ ನಾಯಕತ್ವದ ಗುಣ, ಬೋಧನೆಯಲ್ಲಿ ಸೃಜನಶೀಲತೆ, ಜೀವನ ಮೌಲ್ಯಗಳು, ಭಾರತೀಯ ಸಂಸ್ಕೃತಿ, ಸಂವಹನ ಕಲೆ, ವರದಿ ರಚನೆ : ಒಂದು ಕಲೆ, ಗುರುಶಿಷ್ಯ ಪರಂಪರೆ, ವಿಷಯಗಳ ಕುರಿತು ಅನುಕ್ರಮವಾಗಿ ಕೆ.ಜಯಪ್ರಕಾಶರಾವ್, ಪ್ರೊ.ಹೆಚ್.ಎಸ್.ಉಮೇಶ್, ಡಾ.ಜಿ.ಕೃಷ್ಣಪ್ಪ, ಪ್ರೊ,ಕೆ.ಅನಂತರಾಮು, ಡಾ.ಜಿ.ಅಚ್ಯುತರಾವ್, ರವೀಂದ್ರ ಭಟ್, ವಿದ್ವಾನ್ ಹೆಚ್.ವಿ.ನಾಗರಾಜರಾವ್ ಇವರುಗಳು ಉಪನ್ಯಾಸ ನೀಡಲಿದ್ದಾರೆ.

ಶಿಬಿರದಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಯೋಗ ಮತ್ತು ಧ್ಯಾನ, ದೇಸಿ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ ಎಂದು ಸಂಚಾಲಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: