ಪ್ರಮುಖ ಸುದ್ದಿ

ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು ಎಂಬ ಹೇಳಿಕೆ : ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಬಿಜೆಪಿ ದೂರು

ರಾಜ್ಯ(ಬೆಂಗಳೂರು)ಏ.26:- ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷಗಳ ಹಿಂದೆಯೇ ಗೊತ್ತಿತ್ತು ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ವಿಧಾನಸೌಧ ಪೊಲೀಸ್ ಠಾಣೆಗೆ ಬಿಜೆಪಿ ದೂರು ನೀಡಿದೆ.

ವಿಧಾನಸೌಧದ ಪೊಲೀಸ್ ಠಾಣೆಗೆ ತೆರಳಿದ ಎಸ್ ಸಿ ಮೊರ್ಚಾ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ  ಚಿ.ನಾ ರಾಮು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ವಾಹನವನ್ನು ಸ್ಪೋಟಿಸಿ ಉಗ್ರರು ಯೋಧರನ್ನ ಹತ್ಯೆ ಮಾಡಿದ್ದರು. ಈ ಸಂಬಂಧ  ಉಗ್ರರ ಸಂಚಿನ ಬಗ್ಗೆ ತಮಗೆ ಮೊದಲೇ ಗೊತ್ತಿತ್ತು. ಚುನಾವಣೆ ವೇಳೆ ವೋಟ್ ಗಿಟ್ಟಿಸಿಕೊಳ್ಳಲು ಮೋದಿ ಪಾಕ್ ಜತೆ ಸಂಘರ್ಷ ಮಾಡಿಸುತ್ತಾರೆ  ಎಂದು ಮಾಜಿ ಸೈನಿಕರೊಬ್ಬರು ತಿಳಿಸಿದ್ದರು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ಬಗ್ಗೆ ಆಕ್ಷೇಪಿಸಿರುವ ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮತ್ತು ಬಿಜೆಪಿ ಮುಖಂಡರು ಇಂದು ಸಿಎಂ ವಿರುದ್ಧ ವಿಧಾನಸೌಧ ಠಾಣೆಗೆ ದೂರು  ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: