ಮೈಸೂರು

ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶಾತಿ ಆರಂಭ : ಅರ್ಜಿ ಆಹ್ವಾನ

ಮೈಸೂರು,ಏ.26 : ಮೈವಿವಿಯ 2019-20ನೇ ಶೈಕ್ಷಣಿಕ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶಾತಿಯು ಆರಂಭವಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಇದರೊಂದಿಗೆ ಹಾಡುಗಾರಿಕೆ, ಕೊಳಲು, ಪಿಟೀಲು, ಮೃದಂಗ, ವೀಣೆ, ನೃತ್ಯ, ನಾಟಕಶಾಸ್ತ್ರ, ಗಮಕ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಶಾಸ್ತ್ರ, ಐಚ್ಛಿಕ ಕನ್ನಡ, ಇಂಗ್ಲಿಷ್ ವಿಷಯಗಳನ್ನೊಳಗೊಂಡ ಮೂರು ವರ್ಷದ  ಬಿ.ಎ. (ಫೈನ್ ಆರ್ಟ್ಸ್) ತರಗತಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹಾಗೂ, ಮೃದಂಗ, ಹಾಡುಗಾರಿಕೆ, ಕೊಳಲು, ವೀಣೆ, ನಾಟಕಶಾಸ್ತ್ರ, ನೃತ್ಯ ವಿಷಯಗಳ ಎರಡು ವರ್ಷದ ಡಿಪ್ಲೊಮಾ ತರಗತಿಗೆ ಮಾರಂಭಿಸಲಾಗಿದೆ, ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗೆ ಕಚೇರಿ ದೂ.ಸಂ. 0821 2419586, ಮೊ.ಸಂ.9110404422, 9449886315 ಅನ್ನು ಸಂಪರ್ಕಿಸಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: