ಪ್ರಮುಖ ಸುದ್ದಿಮೈಸೂರು

ಮಂಜಿನ ನಗರಿಯಾದ ಮಲ್ಲಿಗೆ ನಗರಿ : ಸ್ನೋ ಪಾರ್ಕ್ ಗೆ ಚಾಲನೆ ನೀಡಿದ ಸಚಿವ ಸಾ.ರಾ.ಮಹೇಶ್

ಮೈಸೂರು,ಏ.27:- ಮಲ್ಲಿಗೆ ನಗರಿ  ಇದೀಗ ಮಂಜಿನ ನಗರಿಯಾಗಿದೆ.  ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ನಲ್ಲಿ ಆಕರ್ಷಣಿಯ ಸ್ನೋ ಪಾರ್ಕ್ ನಿರ್ಮಿಸಲಾಗಿದೆ.

10 ಡಿಗ್ರಿ ತಾಪಮಾನದಲ್ಲಿ ಹಿಮಾಲಯ ಪರ್ವತದ ಅನುಭವ ನೀಡಲಿರುವ ಸ್ನೋ ಪಾರ್ಕ್ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸ್ನೋ ಪಾರ್ಕ್ ಗೆ ಪ್ರವಾಸೋದ್ಯಮ ಸಚಿವ ಸಾ‌.ರಾ. ಮಹೇಶ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ದಟ್ಟ ಮಂಜಿನ ಪದರದ ಮೇಲೆ ಸಂಚರಿಸುವ ಪ್ರವಾಸಿಗರು ಇಲ್ಲಿ ಹಿಮಾಲಯ ಮತ್ತು ಆಲ್ಸ್ ಪರ್ವತ ಶ್ರೇಣಿಯ ಅನುಭವ ಪಡೆಯಲಿದ್ದಾರೆ. ಒಟ್ಟು 40 ಸಾವಿರ ಚದರ ಅಡಿಯ ಬೃಹತ್ ಸ್ಕೋ ಪಾರ್ಕ್ ಇದಾಗಿದ್ದು, ಭಾರತದ ಅತಿ ದೊಡ್ಡ ಸ್ನೋ ಪಾರ್ಕ್ ನಲ್ಲಿ ಜಿ ಆರ್ ಎಸ್ ಸ್ನೋ ಪಾರ್ಕ್ ಒಂದಾಗಿದೆ.  ಉತ್ತಮ ಪರಿಸರ ಕಾಯ್ದುಕೊಳ್ಳಲಿದೆ .  ವಿಶ್ವದ ಅತಿ ದೊಡ್ಡ ಸ್ಕೋ ಪಾರ್ಕ್ ದುಬೈನಲ್ಲಿರುವ ಪಾಲ್ ಗೆ ಹೋಲುವಂತಿದೆ.   ಬೃಹತ್ ತೂಗು ಸೇತುವೆಗಳು ಶಿಖರಗಳ ನಡುವೆ ಹಾದುಹೋಗುವ ಶ್ರೇಣಿ,ಸೈಡ್ಲ್, ಕ್ಯಾರ್ ಸೋಲ್ ಗಳು , ಆರ್ಟಿ ಕ್ಲೈಂಬ್, ಹಿಮದ ಗುಹೆಗಳು , ಹಿಮ ಪರ್ವತದ ಪುಟಾಣಿ ರೈಲು ಇದರ ನಡುವೆ ಆಡುತ್ತಾ ಫೋಟೋ ಕ್ಲಿಕ್ಕಿಸುತ್ತಾ ಬಿಸಿ ಬಿಸಿ ಕಾಫಿ ಸವಿಯಬಹುದಾಗಿದೆ. ಮಕ್ಕಳಿಂದ ಹಿರಿಯರವರೆಗೂ ಮಂಜಿನ ಪ್ರಪಂಚದಲ್ಲಿ ಮೈಮರೆತು ಮೋಜು ಮಸ್ತಿ ಮಾಡಬಹುದು

ಸಚಿವ ಸಾ.ರಾ.ಮಹೇಶ್ ಮಾತನಾಡಿ ಮೈಸೂರು ನಗರದಲ್ಲಿ 20 ವರ್ಷದ ಹಿಂದೆ ಈ ಜಿ ಆರ್ ಎಸ್ ನಿರ್ಮಾಣ ವಾಗಿದೆ. ಇಂತಹ ಅದ್ಭುತ ತಾಣಕ್ಕೆ ನಾನು ವೈಯುಕ್ತಿಕ ಅಭಿನಂದನೆ ಸಲ್ಲಿಸುತ್ತೇನೆ. ಹೋಟೆಲ್, ವಾಣಿಜ್ಯೋದ್ಯಮ ಅಭಿವೃದ್ಧಿ ಆಗಬೇಕೆಂದರೆ ವಿನೂತನ ಕಾರ್ಯಕ್ರಮ ಮಾಡಬೇಕು. ಹಣ ಸಂಪಾದನೆ ಮಾಡದೇ ಸಮಾಜ ಸೇವೆ ಕೂಡ ಮಾಡಬೇಕು.  ಜಿ.ಅರ್.ಎಸ್ ಪ್ಯಾಂಟಿಸಿ ಪಾರ್ಕ್ ನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸ್ನೋ ಪಾರ್ಕ್ ನಿರ್ಮಾಣ ಮಾಡಿರುವುದು ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.  ನನಗೆ ಪುರಾತತ್ವ ಇಲಾಖೆ ಕಟ್ಟಡಗಳು ಹಾಳಾಗುತ್ತಿದೆ ಎಂದು ಮಾಹಿತಿ ಬಂದಿತ್ತು. ತಕ್ಷಣ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಪರಿಶೀಲನೆ ಮಾಡಿದ್ದೇವೆ. ನಮ್ಮ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡಬೇಕು. 50 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದಿಂದ ಚಾಮುಂಡಿ ಬೆಟ್ಟ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರವಾಸಿಗರು ಮೈಸೂರಿಗೆ ಆಗಮಿಸಿ ಒಂದೇ ದಿನಕ್ಕೆ ಹೊರಟು ಬಿಡುತ್ತಾರೆ. ಆದ್ದರಿಂದ ಪ್ರವಾಸಿಗರನ್ನು ಸೆಳೆಯಲು ಡಿಸ್ನಿ ಲ್ಯಾಂಡ್ ಮಾದರಿ ಮಾಡಲು ಮುಂದಾದೆವು. ಡಿಸ್ನಿಲ್ಯಾಂಡ್ ನಿರ್ಮಾಣಕ್ಕೆ ಪರ ವಿರೋಧ ಚರ್ಚೆಗಳಾಗುತ್ತಿದೆ. ಸದ್ಯಕ್ಕೆ ಕಾವೇರಿ ಪ್ರತಿಮೆ ನಿರ್ಮಾಣ ಹೊರತುಪಡಿಸಿ ಉಳಿದೆಲಾ ಅಭಿವೃದ್ಧಿ ಕಾರ್ಯ  ಮಾಡಲು ಸರ್ಕಾರ ಮುಂದಾಗಿದೆ. ಇಂತಹ ಅನೇಕ ವಿಭಿನ್ನ ವಿನೂತನ ಕಾರ್ಯಕ್ರಮದಿಂದ ಆದಾಯ ಹೆಚ್ಚಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗುವುದರಿಂದ ಸರ್ಕಾರಕ್ಕೂ ಲಾಭವಾಗಲಿದೆ. ಈ ರೀತಿಯ ಯೋಜನೆಗಳಿಗೆ ಸರ್ಕಾರ ಸಬ್ಸಿಡಿ ನೀಡಲಿದೆ. 5 ಕೋಟಿ ಒಳಗಿನ ಯೋಜನೆಗೆ ಶೇಕಡ 30 ರಷ್ಟು ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ ಎಂದರಲ್ಲದೇ ಜಿ.ಆರ್.ಎಸ್. ನ ವಿನೂತನ ಸ್ನೋ ಪಾರ್ಕ್ ಗೆ   ಶುಭಾಶಯ ಕೋರಿದರು.

ಈ ಸಂದರ್ಭ ಅನೇಕ ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: