ಲೈಫ್ & ಸ್ಟೈಲ್

ಸ್ಪ್ರೌಟ್ಬಾಕ್ಸ್ ಮೈಸೂರಿನೊಂದಿಗೆ ಮೊದಲ ಕೊ-ವರ್ಕಿಂಗ್ ಸ್ಪೇಸ್ ಪಡೆದುಕೊಂಡ ಮೈಸೂರು ನಗರ

ಮೈಸೂರು, ಏ. 27:-  ಭಾರತದ ಮೊದಲ ಮತ್ತು ಅನನ್ಯ ಕೊ-ವರ್ಕಿಂಗ್ ಸಮೂಹವಾಗಿರುವ ಸ್ಪ್ರೌಟ್ಬಾಕ್ಸ್, ಮೈಸೂರಿನ ‘ಮಾಲ್ ಆಫ್ ಮೈಸೂರಿನ’ ನಾಲ್ಕನೇ ಮಹಡಿಯಲ್ಲಿದೆ. ಮೊದಲ ಹಂತದಲ್ಲಿ ನೂರಕ್ಕೂ ಹೆಚ್ಚು ಆಸನ ಸಾಮರ್ಥ್ಯದೊಂದಿಗೆ 5,000 ಚದರ ಅಡಿ ಹರಡಿಕೊಂಡಿದ್ದು ಮುಂದಿನ ಆರು ತಿಂಗಳೊಳಗೆ ಹೆಚ್ಚುವರಿ 10,000 ಚದರ ಅಡಿಗೆ ವಿಸ್ತರಣೆಯಾಗಲಿದೆ. ಫ್ರೀಲಾನ್ಸರ್, ಸ್ಟಾರ್ಟ್ಅಪ್ ಮತ್ತು ಕಾರ್ಪೊರೇಟ್ ವಲಯಗಳ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಸ್ಪ್ರೌಟ್ಬಾಕ್ಸ್, ಕೊ-ವರ್ಕಿಂಗ್ ಜಾಗ, ಸೇವೆಯುಕ್ತ ಕಛೇರಿ ಜಾಗ, ವರ್ಚುವಲ್ ಕಛೇರಿ ಅಥವಾ ಬಳಕೆದಾರರ ಅಗತ್ಯತೆಗಳಿಗೆ ಅನುಗುಣವಾಗಿ ಸೇವೆ ಒದಗಿಸಲಿದೆ.

ಈ ಕುರಿತು ಮಾಧ್ಯಮಗಳಿಗೆ ಸ್ಪ್ರೌಟ್ಬಾಕ್ಸ್ನ ಸಹಸಂಸ್ಥಾಪಕರಾದ ಗಗನ್ದೀಪ್ ಸಿಂಗ್ ಸಪ್ರಾ ಮಾಹಿತಿ ನೀಡಿ ರಿಯಲ್ ಎಸ್ಟೇಟ್ ಸೇವೆಗಳ ಸಂಸ್ಥೆ ಸಿಬಿಆರ್ಇ ಹೇಳುವಂತೆ, “ನೀಡಿರುವ ಆಸನಗಳ ಬಳಕೆ ಜಾಗತಿಕ ಸರಾಸರಿ 60 ಶೇಕಡಾ, ಅದೂ ಕೂಡ ಖಾಲಿ ಆಸನಗಳನ್ನು ಬಿಟ್ಟು, ಸಭಾ ಕೊಠಡಿಗಳ ಬಳಕೆಯ ಜಾಗತಿಕ ಸರಾಸರಿ ಕೇವಲ 30 ಶೇಕಡಾ”. ಸಿಬಿಆರ್ ಇ ಪ್ರಕಾರ, ಇನ್ನು ಮುಂದಿನ ಕೆಲವು ವರ್ಷಗಳಲ್ಲಿ ಭಾರತಾದ್ಯಂತ ಕಛೇರಿ ಬಾಡಿಗೆ ನಿರಂತರವಾಗಿ ಹೆಚ್ಚುತ್ತದೆ, ಕೊ-ವರ್ಕಿಂಗ್ ಆಪರೇಟರ್ ಗಳು ಬಾಡಿಗೆಗೆ ನೀಡುವ ಒಟ್ಟು ಜಾಗ ಟೈರ್ 1 ಮತ್ತು ಟೈರ್ 2 ನಗರಗಳಲ್ಲಿ 2020 ರ ವೇಳೆಗೆ 6 ರಿಂದ 10 ಮೀಟರ್ ಚದರ ಅಡಿಗೆ ತಲುಪಬಹುದು.

“ನಾವು ಮೈಸೂರಿಗೆ ಮೊದಲ ಕೊ ವರ್ಕಿಂಗ್ ಸ್ಪೇಸ್ ಅನ್ನು ನೀಡಲು ತುಂಬಾ ಸಂತೋಷಪಡುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ನಾವು ನಮ್ಮ ದೃಷ್ಟಿಕೋನ ಮತ್ತು ಅರ್ಥಪೂರ್ಣ ಸಹಯೋಗದೊಂದಿಗೆ ಮತ್ತು ಸೃಜನಶೀಲ ಕೊ-ವರ್ಕ್ ಸ್ಪೇಸ್ ರಚಿಸಲು ಶ್ರಮಿಸುತ್ತಿದ್ದೇವೆ ಮತ್ತು ಈ ಸ್ಥಳದಲ್ಲಿ ನಾವೀನ್ಯತೆಗಾಗಿ ಕೆಲಸ ಮಾಡಲಿದ್ದೇವೆ. ಸ್ಪ್ರೌಟ್ಬಾಕ್ಸ್ ಮೈಸೂರು, ತನ್ನ ಸಹ ಕೆಲಸಗಾರರು, ಸಹಯೋಗಿಗಳು, ರಚನೆಕಾರರು ಮತ್ತು ಸಮರ್ಥ ಜನರೆಂಬ ನಮ್ಮ ಕುಟುಂಬವನ್ನು ಬೆಳೆಸಲಿದೆ. ನಾವು ಮುಂದಿನ ಆರು ತಿಂಗಳುಗಳಲ್ಲಿ ಹೆಚ್ಚುವರಿಯಾಗಿ 10,000 ಚದರ ಅಡಿ ಜಾಗವನ್ನು ಸೇರಿಸಲಿದ್ದೇವೆ.” ಎಂದಿದ್ದಾರೆ.

ಈ ಸಂದರ್ಭ ಸ್ಪ್ರೌಟ್ಬಾಕ್ಸ್ನ ಸ್ಥಾಪಕ ತಂಡದ ಹರ್ಪ್ರೀತ್ ಸಪ್ರಾ , ಐಎಫ್ಬಿ ಇಂಡಸ್ಟ್ರೀಸ್ ಲಿಮಿಟೆಡ್ನ ಗ್ರಾಹಕ ಸಂಪರ್ಕ ವಿಭಾಗದ ಮುಖ್ಯಸ್ಥ ವೇಭವ್ ಆನಂದ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: