ಮನರಂಜನೆ

`ಪ್ರೀಮಿಯರ್ ಪದ್ಮಿನಿ’ ವೀಕ್ಷಿಸಿದ ನಟ ಸುದೀಪ್

ಬೆಂಗಳೂರು,ಏ.27-ನಟ ಜಗ್ಗೇಶ್ ಅಭಿನಯದ `ಪ್ರೀಮಿಯರ್ ಪದ್ಮಿನಿ’ ಸಿನಿಮಾ ತೆರೆಕಂಡಿದ್ದು, ಸಿನಿಮಾಗೆ ರಾಜ್ಯಾದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದೀಗ ಸಿನಿಮಾ ವೀಕ್ಷಿಸಿದ ನಟ ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪ್ರೀಮಿಯರ್ ಪದ್ಮಿನಿ ಒಳ್ಳೆಯ ಸಿನಿಮಾ. ಭಾವನಾತ್ಮಕವಾಗಿ ಪ್ರೇಕ್ಷಕರ ಮನಸ್ಸು ಮುಟ್ಟುವ ಸಿನಿಮಾ. ಜಗ್ಗೇಶ್ ಅವರು ಹೊಸದಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಮೂಲಕ ಹೃದಯ ಸ್ಪರ್ಶಿಸುವಂತಹ ಅಭಿನಯ ನೀಡಿದ್ದಾರೆ. ಚಿತ್ರದ ಎಲ್ಲ ಕಲಾವಿದರು, ತಂತ್ರಜ್ಞರ ಕೆಲಸ ಮೆಚ್ಚುವಂತಹದ್ದು’ ಎಂದು ಟ್ವಿಟರ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್, ‘ದೂರದ ಹೈದರಾಬಾದಿನ ಚಿತ್ರೀಕರಣದ ನಡುವೆಯು ಬಿಡುವು ಮಾಡಿಕೊಂಡು ನೋಡಿ ಚಿತ್ರತಂಡಕ್ಕೆ ಹಾರೈಸಿದ್ದು ಕಂಡು ಕನ್ನಡ ಚಿತ್ರರಂಗದ ಬಗ್ಗೆ ನಿಮಗಿರುವ ಬದ್ಧತೆ ಪ್ರೀತಿ ನಿರೂಪಿಸಿದ್ದೀರಿ ಧನ್ಯವಾದಗಳು ಸಣ್ಣಪದ..I just say i love you… ನಿಮ್ಮ ಸರ್ವಕಾರ್ಯ ಜಯಪ್ರಧವಾಗಲಿ.. ಶುಭದಿನ…’ ಎಂದು ಥ್ಯಾಂಕ್ಸ್ ಹೇಳಿದ್ದಾರೆ.

ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಸುದೀಪ್ ಮುಂದಿನ ವಾರದಿಂದ ದಬಾಂಗ್ 3 ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಜಗ್ಗೇಶ್ ಜೊತೆ ಮಧುಬಾಲ, ಸುಧಾರಾಣಿ, ಪ್ರಮೋದ್, ವಿವೇಕ್ ಸಿಂಹ, ಹಿತಾ ಚಂದ್ರಶೇಖರ್ ಸೇರಿದಂತೆ ಹಲವರು ನಟಿಸಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದು, ರಮೇಶ್ ಇಂದಿರಾ ನಿರ್ದೇಶಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: