ಕ್ರೀಡೆ

ಅರ್ಜುನ ಪ್ರಶಸ್ತಿಗೆ ಜಡೇಜಾ, ಶಮಿ, ಬುಮ್ರಾ, ಪೂನಂ ಯಾದವ್ ಹೆಸರು ಶಿಫಾರಸು

ನವದೆಹಲಿ,ಏ.27ಕ್ರೀಡಾ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಭಾರತ ಸರ್ಕಾರ ಕೊಡಮಾಡುವ ಅರ್ಜುನ ಪ್ರಶಸ್ತಿಗೆ ಕ್ರಿಕೆಟಿಗರಾದ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ಪೂನಂ ಯಾದವ್ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶಿಫಾರಸು ಮಾಡಿದೆ.

ಕ್ರಿಕೆಟ್‌ನಲ್ಲಿ ಈ ಎಲ್ಲ ಆಟಗಾರರ ಸಾಧನೆಯನ್ನು ಗುರುತಿಸಿ ಬಿಸಿಸಿಐ ಪ್ರಶಸ್ತಿಗಾಗಿ ಶಿಫಾರಸುಗೈದಿದೆ. ಈ ಬಗ್ಗೆ ಸಭೆ ಸೇರಿದ ಬಿಸಿಸಿಐ ಓರ್ವ ಮಹಿಳಾ ಆಟಗಾರ್ತಿ ಸೇರಿದಂತೆ ನಾಲ್ವರು ಆಟಗಾರರನ್ನು ಶಿಫಾರಸು ಮಾಡಲು ನಿರ್ಧರಿಸಿದೆ.

ಭಾರತ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಶಮಿ 2018ರ ಸಾಲಿನಲ್ಲಿ 68 ಟೆಸ್ಟ್ ವಿಕೆಟುಗಳನ್ನು ಕಬಳಿಸಿದ್ದಾರೆ. ಇನ್ನು ರವೀಂದ್ರ ಜಡೇಜಾ ಆಲ್‌ರೌಂಡರ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

2018ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯು ಮಾಡಿರುವ ಬುಮ್ರಾ ವಿದೇಶದಲ್ಲಿ ಆಡಿರುವ 9 ಟೆಸ್ಟ್ ಪಂದ್ಯಗಳಲ್ಲೇ 48 ವಿಕೆಟುಗಳನ್ನು ಕಬಳಿಸಿದ್ದಾರೆ.

ಮಹಿಳಾ ಕ್ರಿಕೆಟ್‌ನಲ್ಲಿ ಪೂನಂ ಯಾದವ್ ಜಾದೂ ಮೆರೆದಿದ್ದರು. ಅಲ್ಲದೆ ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: