ಮೈಸೂರು

ಕಟ್ಟಡ ನಿರ್ಮಾಣಕ್ಕೆ ಸಾಲ ಪಡೆದು ಸಾಲ ತೀರಿಸದ ಹಿನ್ನೆಲೆ : ಕಟ್ಟಡ ಬ್ಯಾಂಕ್ ಸುಪರ್ದಿಗೆ; ಬಾಡಿಗೆದಾರರು ಸಂಕಷ್ಟದಲ್ಲಿ

ಮೈಸೂರು,ಏ.27:- ಕಟ್ಟಡ ನಿರ್ಮಾಣಕ್ಕೆ ಸಾಲ ಪಡೆದು ಮಾಲೀಕರು ಸಾಲ ತೀರಿಸದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ವಾಣಿಜ್ಯ ಕಟ್ಟಡ ಸ್ವಾಧೀನಪಡಿಸಿಕೊಂಡಿದ್ದು ಹೀಗಾಗಿ ಬಾಡಿಗೆದಾರರು ಸಂಕಷ್ಟಕ್ಕೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸರಸ್ವತಿ ಪುರಂ ನಲ್ಲಿರುವ ಮೋಹನ್ ಭಂಡಾರ ಕಟ್ಟಡವನ್ನು  ವಿಜಯ ಬ್ಯಾಂಕ್  ಸ್ವಾಧೀನ ಪಡಿಸಿಕೊಂಡಿದೆ. ಕಟ್ಟಡದ ಮೇಲೆ  ಕಟ್ಟಡದ ಮಾಲೀಕ ನಾಗರಾಜ್  ಕೋಟ್ಯಾಂತರ ರೂಪಾಯಿ ಹಣ ಸಾಲ ಪಡೆದಿದ್ದರು. ಕಟ್ಟಡ ನಿರ್ಮಾಣಕ್ಕೆ ಸಾಲ ಪಡೆದಿದ್ದ ಮಾಲೀಕ ನಾಗರಾಜ್ ಸಾಲವನ್ನು ತೀರಿಸಿರಲಿಲ್ಲ. ಹೀಗಾಗಿ ವಿಜಯ ಬ್ಯಾಂಕ್ ವಾಣಿಜ್ಯ ಕಟ್ಟಡಕ್ಕೆ ಕಳೆದ ಕೆಲ ತಿಂಗಳ ಹಿಂದೆ ಬೀಗ ಜಡಿದಿತ್ತು.

ಇದೀಗ ಕಟ್ಟಡವನ್ನು ವಿಜಯಬ್ಯಾಕ್  ಸುಪರ್ದಿಗೆ ಪಡೆದಿದ್ದು ತನ್ನ ಸುಪರ್ದಿಯಲ್ಲಿರುವ ಕಟ್ಟಡದಲ್ಲಿ ನೂತನ ಶಾಖೆ ತೆರಯಲು ವಿಜಯ್ ಬ್ಯಾಂಕ್ ಮುಂದಾಗಿದೆ. ಈ ಹಿಂದೆ ವಿಜಯ ಬ್ಯಾಂಕ್ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತಿತ್ತು. ಕೋರ್ಟ್ ಆದೇಶದ ಮೂಲಕ ಕಟ್ಟಡವನ್ನು ಬ್ಯಾಂಕ್ ತನ್ನ ಸುಪರ್ದಿಗೆ ಪಡೆದಿದೆ. ಇದೀಗ ಈ ಕಟ್ಟಡದಲ್ಲಿ ನೂತನ ಶಾಖೆ ತೆರೆಯಲು ಮುಂದಾಗಿದೆ.

ಮೋಹನ್ ಭಂಡಾರ್ ನಲ್ಲಿ ತೆರೆದಿದ್ದ ಮಳಿಗೆಗಳ  ಮಾಲೀಕರೊಂದಿಗೆ ಮೋಹನ್ ಭಂಡಾರ್ ಮಾಲೀಕರು ಲೀಸ್ ಅಂಡ್ ರೆಂಟ್ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೇ ಮಾಲೀಕರ ಸಾಲಕ್ಕೆ ಬಾಡಿಗೆದಾರರಿಗೆ ಸಂಕಷ್ಟ ಉಂಟಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: