ಸುದ್ದಿ ಸಂಕ್ಷಿಪ್ತ

ಮೇ.1 ರಂದು ನರಸಿಂಹ ಮಾಲಾ ದೀಕ್ಷೆ

ಮೈಸೂರು,ಏ.27 : ನರಸಿಂಹ ಜಯಂತಿ ಮಹೋತ್ಸವ ಅಂಗವಾಗಿ ಕೂಡ ನರಸಿಂಹ ಮಾಲಾ ದೀಕ್ಷೆಯನ್ನು ಮೇ.1ರಂದು ಬೆಳಗ್ಗೆ 10 ಗಂಟೆಗೆ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಏರ್ಪಡಿಸಲಾಗಿದೆ.

ಇದರಂಗವಾಗಿ ಏ.30 ರಿಂದ ಮೇ.3ರವರೆಗೆ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಮಠದ ಪೀಠಾಧೀಶ್ವರರಾದ ಶ್ರಿ ಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವರಸ್ವತಿ ಸ್ವಾಮೀಜಿಗಳು ಬೆಳಗ್ಗೆ ಸಮಯದಲ್ಲಿ ತೀರ್ಥ ಫಲಮಂತ್ರಾಕ್ಷತೆ ನೀಡಲಿದ್ದಾರೆ ಎಂದು ಮಠದ ವ್ಯವಸ್ಥಾಪಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: