ಮೈಸೂರು

ಫಲಾನುಭವಿಯ ಮೀಸೆ ತಿರುವಿದ ಸಿಎಂ

ನಾಡಿನ ದೊರೆಗಳು ನಮ್ಮ ಮೇಲೆ ಗಮನ ಇರಿಸೋದಿಕ್ಕೆ ಸಾಧ್ಯನಾ ಎನ್ನುವ ಸಾಮಾನ್ಯ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸುವುದು ಸಹಜ. ಆದರೆ ನಾವೂ ಕೂಡ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದಲ್ಲಿ ಇದೇ ಮೊದಲಬಾರಿಗೆ ಆದಿವಾಸಿಗಳಿಗೆ ಸವಲತ್ತು ವಿತರಣಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,  ಸೋಲಿಗ, ಜೇನುಕುರುಬ, ಮಲೆಕುಡಿಯ, ಕೊರಗ, ಸಿದ್ಧಿ ಸೇರಿದಂತೆ 13 ಆದಿವಾಸಿ ಸಮುದಾಯದ ಜನರಿಗೆ ಪೌಷ್ಠಿಕ ಆಹಾರ ಸೇರಿದಂತೆ ಮೊದಲಾದ ಸವಲತ್ತುಗಳನ್ನು ವಿತರಿಸಿದರು.ಈ ವೇಳೆ ಹಕ್ಕು ಪತ್ರ ಪಡೆಯಲು ಬಂದಿದ್ದ ಫಲಾನುಭವಿಯೊಬ್ಬರ ಮೀಸೆಯನ್ನು ಸಿಎಂ ತಿರುವಿ ಸಂತೋಷಪಡುತ್ತಿರುವುದು ಎಲ್ಲರ ಗಮನ ಸೆಳೆದಿತ್ತು. ಅವರ ಜೊತೆ ಇದ್ದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಿಎಂ ಅವರು ಮೀಸೆ ತಿರುವುವುದನ್ನು ನೋಡಿ ತಾನು ನಕ್ಕು ಸಂತೋಷಪಟ್ಟರು.

Leave a Reply

comments

Related Articles

error: