ಕರ್ನಾಟಕ

ಪ್ರವಾಸಿಗರ ಅನುಕೂಲಕ್ಕೆ ಶೀಘ್ರದಲ್ಲಿಯೇ ಬೆಂಗಳೂರಿ-ಹಾಸನ ನೇರ ರೈಲು ಸಂಚಾರ

ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರ ಶ್ರವಣ ಬೆಳಗೊಳದಲ್ಲಿ 2018ರ ಫೆಬ್ರವರಿಯಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕವನ್ನು ಕಣ್ಮನತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಬೆಂಗಳೂರಿನಿಂದ ಹಾಸನಕ್ಕೆ ನಡುವೆ ಆರಂಭವಾಗುತ್ತಿರುವ ನೇರ ರೈಲ್ವೆ ಸಂಪರ್ಕವು ಅನುಕೂಲವಾಗಲಿದೆ ಎನ್ನುವ ಅನಿಸಿಕೆಯನ್ನು ಕೇಂದ್ರ ರೈಲ್ವೆ ಇಲಾಖೆಯ ಪ್ರಬಂಧಕ ಗೋಪಿನಾಥನ್ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಹಾಸನ-ಬೆಂಗಳೂರು 161 ಕಿಮೀ ನೇರ ರೈಲ್ವೆ ಸಂಪರ್ಕವೂ ಕೆಲವೇ ದಿನಗಳಲ್ಲಿ ಚಾಲನೆ ಲಭಿಸಲಿದೆ, ಈಗಾಗಲೇ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು. ರೈಲ್ವೆ ಇಲಾಖೆ ಸುರಕ್ಷತಾ ಆಯುಕ್ತರು ಹಸಿರು ನಿಶಾನೆ ತೋರಿದಾಕ್ಷಣವೇ ರೈಲು ಸಂಚಾರವು ಆರಂಭಗೊಳ್ಳಲಿದೆ, ಕ್ಷೇತ್ರಕ್ಕೆ ಗೋಮಟೇಶ್ವರನ ದರ್ಶನ ಪಡೆಯಲು ದಿನಂಪ್ರತಿ ಸಾವಿರಾರು ಜನ ಭಕ್ತರು ಆಗಮಿಸುವರು, ಆದ್ದರಿಂದ ರೈಲು ಸಂಚಾರ ಇಲ್ಲಿನ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೇ ಮಠದ ವತಿಯಿಂದಲೇ ರೈಲು ನಿಲ್ದಾಣಕ್ಕೆ ಬಸ್ ವ್ಯವಸ್ಥೆಯನ್ನು ಮಾಡುವ ಚಿಂತನೆಯನ್ನು ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಗಳು ಹಂಚಿಕೊಂಡರು.

Leave a Reply

comments

Related Articles

error: