ಮೈಸೂರು

ರಸಾಯನ ಶಾಸ್ತ್ರಕ್ಕೆ ಅಂತ್ಯ ಎನ್ನುವುದಿಲ್ಲ : ಡಾ.ನೆಟ್ಕಲ್ ಎಂ.ಮಾದೇಗೌಡ

ರಸಾಯನ ಶಾಸ್ತ್ರಕ್ಕೆ ಅಂತ್ಯ ಎನ್ನುವುದೇ ಇಲ್ಲ. ಇದರ ಆಳವಾದ ಅಧ್ಯಯನಗಳಿಂದ ಹೆಚ್ಚು ಜ್ಞಾನ ಪಡೆಯಬಹುದು ಎಂದು ಯುಎಸ್ ಎ ವೆಸ್ಟರ್ನ್ ಇಲಿನಾಯ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನೆಟ್ಕಲ್ ಎಂ.ಮಾದೇಗೌಡ ತಿಳಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ವಿದ್ಯಾಲಯದ ಸಭಾಂಗಣದಲ್ಲಿ ಎಮರ್ಜಿಂಗ್ ಟ್ರೆಂಡ್ ನ್ಯಾನೋ ಕೆಮೆಸ್ಟ್ರಿ ಕುರಿತು ಏರ್ಪಡಿಸಲಾದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆಧುನಿಕ ದಿನಗಳಲ್ಲಿ ರಸಾಯನ ಶಾಸ್ತ್ರಗಳಲ್ಲಿ ನ್ಯಾನೋ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ರಸಾಯನ ಶಾಸ್ತ್ರ ಕೇವಲ ಒಂದು ದಿನ ಕಲಿತು ಬಿಡುವಂಥಹ ವಿಷಯವಲ್ಲ. ಇದರಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇದು ಸುಲಭದ ವಿಷಯವಲ್ಲ. ಗಣಿತಕ್ಕಿಂತಲೂ ಕಠಿಣ. ಆದರೆ ಇತ್ತೀಚಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಸಾಯನಶಾಸ್ತ್ರದತ್ತ ಹೆಚ್ಚು ಒಲವು ತೋರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಇದರಲ್ಲಿನ ತಂತ್ರಜ್ಞಾನವನ್ನು ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಆನಂದ್, ಎಸ್ ಡಿಎಂ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಕೆ.ವಿ.ದಾಮೋದರ ಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: