ಮೈಸೂರು

ಅನ್ಯ ಧರ್ಮದ ಕುರಿತು ಅವಹೇಳನಕಾರಿ ಚಿತ್ರ ಬಿತ್ತರ : ಯುವಕನ ಬಂಧನ

ಫೇಸ್ ಬುಕ್ ನ‌ಲ್ಲಿ ಅನ್ಯ‌ಧ‌ರ್ಮ‌ದ‌ ಬ‌ಗ್ಗೆ ಅವ‌ಹೇಳ‌ನ‌ಕಾರಿಯಾಗಿ ಚಿತ್ರ‌ ಭಿತ್ತ‌ರಿಸಿದ‌ ಆರೋಪ‌ದ‌ಡಿ ಯುವ‌ಕ‌ನೋರ್ವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಘಟನೆ ಹುಣಸೂರಿನಲ್ಲಿ ನಡೆದಿದೆ.

ಬಂಧಿತನನ್ನು ಹುಣ‌ಸೂರು ನ‌ಗ‌ರ‌ದ‌ ಮಾರಿಗುಡಿ ಬೀದಿಯ‌  ನಿವಾಸಿ ಆಕಾಶ್ ಎಂದು ಗುರುತಿಸಲಾಗಿದೆ.  ಈತ‌ ಮಂಗಳ‌ವಾರ‌ ತ‌ನ್ನ‌ ಫೇಸ್ ಬುಕ್ ಅಕೌಂಟ್ ನ‌ಲ್ಲಿ ಅನ್ಯ‌ಧ‌ರ್ಮ‌ ಕುರಿತು ಪ್ರ‌ಕ‌ಟಿಸಿದ‌ ಚಿತ್ರ‌ವೊಂದು ವೈರ‌ಲ್ ಆಗಿದ್ದು ಇದ‌ನ್ನು ವೀಕ್ಷಿಸಿದ‌ ಕೆಲ‌ವ‌ರು ನ‌ಗ‌ರ‌ದ‌ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ‌ ಮೇರೆಗೆ ಪೊಲೀಸ‌ರು ಆತ‌ನ‌ನ್ನು ಬಂಧಿಸಿದ್ದಾರೆ. ವಿಚಾರ‌ಣೆ ವೇಳೆ ತಾನೇ ಈ ಕೃತ್ಯವೆಸ‌ಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿ ವಿರುದ್ಧ ಐಟಿ ಕಾಯ್ದೆಯಡಿ ಪ್ರ‌ಕ‌ರ‌ಣ ದಾಖ‌ಲಾಗಿದ್ದು ನ್ಯಾಯಾಂಗ‌ ಬಂಧ‌ನ‌ಕ್ಕೊಪ್ಪಿಸ‌ಲಾಗಿದೆ ಎಂದು ಎಸ್ ಪಿ ಹ‌ರೀಶ್ ಪಾಂಡೆ ತಿಳಿಸಿದ್ದಾರೆ.
ವಿಷ‌ಯ‌ ತಿಳಿಯುತ್ತಿದ್ದಂತೆ ಎಸ್ ಪಿ ರ‌ವಿ ಡಿ.ಚ‌ನ್ನ‌ಣ್ಣ‌ನ‌ವ‌ರ್ ,ಎ ಎಸ್ ಪಿ ಕಲಾಕೃಷ್ಣ‌ ಸ್ವಾಮಿ ನ‌ಗ‌ರ‌ಕ್ಕೆ ಆಗ‌ಮಿಸಿ ಆರೋಪಿಯ‌ನ್ನು ವಿಚಾರ‌ಣೆಗೊಳಪ‌ಡಿಸಿ, ಪ‌ರಿಸ್ಥಿತಿಯ‌ನ್ನು ಅವ‌ಲೋಕಿಸಿದ‌ರು. ನ‌ಗ‌ರ‌ದಲ್ಲಿ ಮುನ್ನೆಚ್ಚ‌ರಿಕಾ ಕ್ರಮವಾಗಿ ಹೆಚ್ಚಿನ‌ ಪೊಲೀಸ್ ಬಿಗಿ ಬಂದೋಬ‌ಸ್ತ್ ಮಾಡ‌ಲಾಗಿತ್ತು.
ಫೇಸ್ ಬುಕ್ ನ‌ಲ್ಲಿ ಹಾಗೂ ವ್ಯಾಟ್ಸ್ ಆಪ್ ಗ‌ಳಲ್ಲಿ ಅನ್ಯ‌ ಧರ್ಮ‌ದ‌ ಬ‌ಗ್ಗೆ ಅವಹೇಳ‌ನಕಾರಿಯಾಗಿ ಚಿತ್ರ‌ ಭಿತ್ತ‌ರಿಸುವುದು ಸಾರ್ವಜ‌ನಿಕ‌ರ‌ ನೆಮ್ಮ‌ದಿಗೆ ಭಂಗ‌ ತ‌ರುವಂತಹ ಕೃತ್ಯ‌ವೆಸ‌ಗಿದ್ದ‌ಲ್ಲಿ ಕ‌ಠಿಣ‌ ಕ್ರ‌ಮ‌ ಜ‌ರುಗಿಸ‌ಲಾಗುವುದೆಂದು ಹ‌ರೀಶ್ ಪಾಂಡೆ ಎಚ್ಚ‌ರಿಸಿದ್ದಾರೆ.

Leave a Reply

comments

Related Articles

error: