ದೇಶಮನರಂಜನೆ

ತಮ್ಮ ಹಕ್ಕು ಚಲಾಯಿಸಿದ ಬಾಲಿವುಡ್ ಸ್ಟಾರ್ ಗಳು

ಮುಂಬೈ,ಏ.29-ಲೋಕಸಭಾ ಮಹಾಕದನದ 4ನೇ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ಬಿರುಸಿನಿಂದ ಮತದಾನ ನಡೆಯುತ್ತಿದೆ.

ಬಾಲಿವುಡ್ ನ ಅನೇಕ ಸ್ಟಾರ್ಸ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸೆಲೆಬ್ರಿಟಿಗಳು ಬೆಳಂಬೆಳಗ್ಗೆಯೆ ಮತಗಟ್ಟೆಗೆ ಆಗಮಿಸಿ ಕ್ಯೂ ನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮತ ಚಲಾಯಿಸುವುದರ ಜತೆಗೆ ಅಭಿಮಾನಿಗಳಿಗೂ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ನಟರಾದ ಅಮೀರ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್, ನಟಿಯರಾದ ಮಾಧುರಿ ಧೀಕ್ಷಿತ್, ಸೊನಾಲಿ ಬೇಂದ್ರೆ, ಪ್ರಿಯಾಂಕ ಚೋಪ್ರಾ, ದಿಯಾ ಮಿರ್ಜಾ, ಊರ್ಮಿಳಾ, ಪ್ರಿಯಾ ದತ್ ಸೇರಿದಂತೆ ಅನೇಕ ಬಾಲಿವುಡ್ ನಟ-ನಟಿಯರು ಮತದಾನ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಜೊತೆ ಆಗಮಿನಿ ಮುಂಬೈನ ಬಾಂದ್ರ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಸೋನಾಲಿ ಬೇಂದ್ರೆ ಬೆಳಿಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಬೆಳಿಗ್ಗೆಯೇ ಮತಗಟ್ಟೆಗೆ ಆಗಮಿಸಿದ ಅಜಯ್ ದೇವಗನ್ ದಂಪತಿ ತನ್ನ ಹಕ್ಕು ಚಲಾಯಿಸಿದ್ದಾರೆ. ಪತ್ನಿ ಕಾಜೋಲ್ ಜೊತೆ ಮುಂಬೈನಲ್ಲಿ ವೋಟ್ ಮಾಡಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಕೂಡ ಬೆಳಿಗ್ಗೆಯೇ ಮತ ಚಲಾಯಿಸಿದ್ದಾರೆ.

ಅಮೆರಿಕಾದ ಗಾಯಕ ನಿಕ್ ಜೋನಸ್ ರನ್ನು ಮದುವೆಯಾದ ಬಳಿಕ ಯುಎಸ್ ನಲ್ಲಿ ನೆಲೆಸಿರುವ ಪ್ರಿಯಾಂಕ ಚೋಪ್ರಾ ಮುಂಬೈಗೆ ಆಗಮಿಸಿ ಮತದಾನ ಮಾಡಿದ್ದಾರೆ. ತನ್ನ ಹಕ್ಕು ಚಲಾಯಿಸಿ, ಶಾಯಿ ಹಾಕಿದ ಬೆರಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪ್ರಿಯಾಂಕ ‘ಇದು ಮುಖ್ಯವಾದ ಸಮಯ. ಪ್ರತಿಯೊಂದು ವೋಟ್ ಕೂಡ ಕೌಂಟ್ ಆಗುತ್ತೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು ವೋಟ್ ಮಾಡಲು ಬೆಳಿಗ್ಗೆಯೆ ಮತಗಟ್ಟೆಗೆ ಆಗಮಿಸಿದ ನಟ ಟೈಗರ್ ಶ್ರಾಫ್ ಕ್ಯೂ ನಲ್ಲಿ ನಿಂತು ಮತದಾನ ಮಾಡಿದ್ದಾರೆ. ಇನ್ನು ನಟಿ ದಿಯಾ ಮಿರ್ಜಾ ಕೂಡ ತನ್ನ ಹಕ್ಕು ಚಲಾಯಿಸಿದ್ದಾರೆ.

ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. (ಎಂ.ಎನ್)

Leave a Reply

comments

Related Articles

error: