ಮೈಸೂರು

ಕಲ್ಮಶ ಭರಿತ ಆಹಾರಗಳಿಂದ ಆಯಸ್ಸು ಕುಂಠಿತ :ಎಮ್.ಐ.ಗಣಗಿ

ಇಂದು ನಾವು ಸೇವಿಸುವ ಆಹಾರಗಳು ಕಲ್ಮಶ ಭರಿತವಾಗಿದ್ದು, ನಮ್ಮ ಆಯಸ್ಸನ್ನು ಕುಂಠಿತಗೊಳಿಸುತ್ತಿದೆ ಎಂದು ನಬಾರ್ಡ್ ಮುಖ್ಯಸ್ಥ ಎಮ್.ಐ.ಗಣಗಿ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಐಎಫ್ ಟಿಟಿಸಿ ಸಭಾಂಗಣದಲ್ಲಿ ಏರ್ಪಡಿಸಲಾದ ಮಸಾಲೆಗಳ ಮೇಲೆ ರಾಷ್ಟ್ರೀಯ ಸಮ್ಮೇಳನ, ಸವಾಲುಗಳು ಮತ್ತು ಅವಕಾಶಗಳು ಎನ್ ಸಿಎಸ್-2017ನ್ನು ಎಮ್.ಐ.ಗಣಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇವತ್ತು ಆಹಾರ ಎನ್ನುವುದು ದೇಹಕ್ಕೆ ಪೂರಕವಾದುದು. ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಆಯಸ್ಸನ್ನು ಕುಂಠಿತಗೊಳಿಸುತ್ತಿದೆ. ಕಾರಣ ಕಲ್ಮಶ ಭರಿತ ಆಹಾರವನ್ನ ನಾವು ಸೇವಿಸುತ್ತಿದ್ದೇವೆ. ಸಿ.ಎಫ್.ಟಿ.ಆರ್.ಐ ಒಳ್ಳೆಯ ಹಾಗೂ ದುಷ್ಪರಿಣಾಮ ಬೀರುವ ಪದಾರ್ಥಗಳನ್ನು ಬೇರ್ಪಡಿಸಿ ಕೊಡುತ್ತಿದೆ.  ಚಾಟ್ ಮಸಾಲ, ಹಾಗೂ ಕೆಮಿಕಲ್ ಪದಾರ್ಥಗಳನ್ನು ಜನರು ತಿರಸ್ಕರಿಸಬೇಕು. ಆದರೆ ಇಂದು ಕುಟುಂಬ ಸಮೇತರಾಗಿ ತೆರಳಿ ಮಸಾಲೆ ಪದಾರ್ಥಗಳನ್ನು ಸೇವಿಸುತ್ತಾರೆ. ಇದು ದುರಂತ ಎಂದರು.
ಸಿ.ಎಫ್.ಟಿ.ಆರ್.ಐ ನಡೆಸಿರುವ ಕಾರ್ಯಗಾರ ಖುಷಿ ತಂದಿದೆ. ಸಿ.ಎಫ್.ಟಿ.ಆರ್.ಐ ನ ಕಲಿಕಾ ಪತ್ರ ಇದ್ದರೆ, ದೇಶದ ಮೂಲೆ ಮೂಲೆಗಳಲ್ಲಿ ಅವರಿಗೆ ಅವಕಾಶಗಳ ಜೊತೆ ಪ್ರತಿಷ್ಠೆ ಇರಲಿದೆ.  ಕೆಮಿಕಲ್ ಯುಕ್ತ ಮಸಾಲೆಯನ್ನು ಮುಂದಿನ ಪೀಳಿಗೆಯವರು ಸಂಪೂರ್ಣ ವಾಗಿ ಬಳಸುವುದು ನಿಲ್ಲಿಸಬೇಕು. ಕುಟುಂಬಗಳು ಕೂಡ ಈ ಬಗ್ಗೆ ಗಮನಹರಿಸಬೇಕು. ಇದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದ ಸಲಹೆ ನೀಡಿದರು.

ಕೋಜಿಕೋಡ್ ನ ಅಡಿಕೆ ಮತ್ತು ಮಸಾಲೆಗಳ ಅಭಿವೃದ್ಧಿ ನಿರ್ದೇಶನಾಲಯದ ಡಾ.ಹೋಮಿ ಚೆರಿಯನ್ ಸ್ಮರಣ ಸಂಚಿಕೆ ಮತ್ತು ನವೀನ ಮಸಾಲೆ ಉತ್ಪನ್ನಗಳ ಕುರಿತ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಮಾಧವ ನಾಯ್ಡು, , ಸಿ.ಎಫ್.ಟಿ.ಆರ್.ಐನ ನಿರ್ದೇಶಕ ರಾಮರಾಜಶೇಖರನ್, ಡಾ.ಕಾಂತಿಪುಡಿ ನಿರ್ಮಲ್ ಬಾಬು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: