ಕರ್ನಾಟಕ

ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

ಮಂಗಳೂರು,ಏ.29- ಫ್ಲ್ಯಾಟ್ ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಕೊಡಿಯಾಲ್ಗುತ್ತು ಸಮೀಪ ನಡೆದಿದೆ.

ಕೊಡಿಯಾಲ್ಬೈಲ್ ನಿವಾಸಿ ರಾಜೇಶ್ ಶೆಣೈ (38) ಮೃತಪಟ್ಟವರು. ರಾಜೇಶ್ ಶೆಣೈ ಅವರು ಕುಟುಂಬ ಕೊಡಿಯಾಲ್ಗುತ್ತುವಿನಲ್ಲಿರುವ ಫ್ಲ್ಯಾಟ್ನಲ್ಲಿ ಎರಡನೇ ಮಹಡಿಯಲ್ಲಿ ವಾಸವಾಗಿತ್ತು. ಹಲವು ಸಮಯದಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ ರಾಜೇಶ್ ಅವರು, ಫ್ಲ್ಯಾಟ್ ತೆರೆದ ಗ್ಯಾಲರಿಗೆ ಬಂದ ವೇಳೆ ಏಕಾಏಕಿ ಆಯತಪ್ಪಿ 2ನೇ ಮಹಡಿಯಿಂದ ಕೆಳಗಿ ಬಿದ್ದಿದ್ದಾರೆ.

ಸ್ಥಳೀಯರು ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜೇಶ್ ಮೃತಪಟ್ಟಿದ್ದಾರೆ. ಘಟನೆ ನಡೆಯುವ ವೇಳೆ ರಾಜೇಶ್ ಅವರ ತಾಯಿ ಮಾತ್ರ ಮನೆಯಲ್ಲಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಹೊರಗಡೆ ಹೋಗಿದ್ದರು. ಘಟನೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)

Leave a Reply

comments

Related Articles

error: