ದೇಶ

ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಬಂಧನ

ಲಖನೌ,ಏ.29-ಟೀ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಅವರನ್ನು ಅಮ್ರೋಹಾ ಪೊಲೀಸರು ಬಂಧಿಸಿದ್ದಾರೆ.

ಶಮಿ ಮನೆಗೆ ತನ್ನ ಪುತ್ರಿ ಬೆಬೊವಿನೊಂದಿಗೆ ಬಂದ ಹಸಿನ್ ಜಹಾನ್ ಅತ್ತೆಯ ಜತೆ ಗಲಾಟೆ ಮಾಡಿದ್ದಾರೆ. ಕೂಡಲೇ ಶಮಿ ತಾಯಿ ಪೊಲೀಸರಿಗೆ ಕರೆ ಮಾಡಿದ್ದು, ಬಲವಂತವಾಗಿ ಮನೆಗೆ ನುಗ್ಗಿ ಗಲಾಟೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಹಸಿನ್ ಜಹಾನ್ ಅವರನ್ನು 24 ಗಂಟೆಗಳ ಕಾಲ ಯಾವುದೇ ವಾರೆಂಟ್ ಇಲ್ಲದೆ ಬಂಧಿಸುವ ಕಾಯಿದೆಯಾದ ಭಾರತೀಯ ದಂಡ ಸಂಹಿತೆ 151ರ ಅಡಿಯಲ್ಲಿ ಬಂಧಿಸಲಾಗಿದೆ. ಶಮಿ ಪ್ರಭಾವ ಬಳಿಸಿ ನನ್ನನ್ನು ಬಂಧಿಸಲಾಗಿದೆ ಎಂದು ಹಸಿನ್ ಜಹಾನ್ ಆರೋಪಿಸಿದ್ದಾರೆ.

ಈ ಹಿಂದೆ ಮೊಹಮ್ಮದ್ ಶಮಿ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ನನಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹಸಿನ್ ಜವಾನ್ ಆರೋಪಿಸಿದ್ದರು. (ಎಂ.ಎನ್)

Leave a Reply

comments

Related Articles

error: