ಪ್ರಮುಖ ಸುದ್ದಿಮೈಸೂರು

ಹೆಪ್ಟಾಥ್ಲಾನ್ ಸ್ಪರ್ಧೆ : ಸಂಪೂರ್ಣ ವೆಚ್ಚ ಭರಿಸಿದ ಮೈಸೂರು ವಿಶ‍್ವವಿದ್ಯಾಲಯ

'ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ' ವಿಷಯವಾಗಿ ದೈಹಿಕ ವಿಭಾಗದಿಂದ ಸ್ಪಷ್ಟನೆ

ಮೈಸೂರು,ಏ.29 : ವಿಶ್ವ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ನಡೆಯುತ್ತಿರುವ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿನಿಯ ಸಂಪೂರ್ಣ ವೆಚ್ಚವನ್ನು  ವಿವಿಯೇ ಭರಿಸಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಸ್ಪಷ್ಟಪಡಿಸಿದೆ.

ವಿಶ್ವದ ವಿದ್ಯಾನಿಲಯಗಳ ಕ್ರೀಡಾಕೂಟ 2019ರ ಮಹಿಳೆಯರ ಹೆಪ್ಟಾಥ್ಲಾನ್ ಸ್ಪರ್ಧೆಗೆ ಆಯ್ಕೆಯಾಗಿರುವ ನಗರದ ಬಸುದೇವ ಸೋಮಾನಿ ಕಾಲೇಜಿನ ವಿದ್ಯಾರ್ಥಿ ಎಂ.ಆರ್.ಧನುಷಾ ಅವರ ಸ್ಪರ್ಧೆಗೆ ತಗಲುವ ವೆಚ್ಚವನ್ನು ಮೈಸೂರು ವಿಶ್ವವಿದ್ಯಾಲಯ ಭರಿಸಲಾಗಿದ್ದು ‘ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ ವಿಷಯವಾಗಿ’  ಮಾಧ್ಯಮಗಳ  ವರದಿಯನ್ನು  ವಿಭಾಗದ ಮುಖ್ಯಸ್ಥರು ತಳ್ಳಿ ಹಾಕಿದ್ದಾರೆ.

ಜುಲೈ 3 ರಿಂದ 14ರವರೆಗೆ ನಡೆಯಲಿರುವ ವಿಶ್ವ ವಿಶ್ವವಿದ್ಯಾನಿಲಯಗಳ ಕ್ರೀಡೆಗಳಲ್ಲಿ ಭಾಗಿಯಾಗಲಿರುವ ‘ಧನುಷಾ’ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅವರಿಗೆ ಧನ ಸಹಾಯಬೇಕೆಂದು ವರದಿಯಾಗಿರುವುದನ್ನು ಅಲ್ಲಗೆಳೆದಿರುವ ವಿವಿಯು, ಖರ್ಚಿನ ಬಾಬ್ತುಗಳು, ವೀಸಾ, ಪ್ರಯಾಣ, ಪೋಷಾಕಿನ ವೆಚ್ಚ, ತರಬೇತಿಗೆ ಸೇರಿದಂತೆ ರೂ.2,26.050 ವೆಚ್ಚವಾಗಲಿದ್ದು, ಅವರ ಭಾಗವಹಿಸುವುದಕ್ಕೆ ಅಗತ್ಯವಾದ ಹಣವನ್ನು ವಿವಿಯ ಆಡಳಿತಾಧಿಕಾರಿಗಳು ಈ ಹಿಂದೆಯೇ ಬಿಡುಗಡೆ ಮಾಡಿದ್ದು ಇದರನ್ವಯ ವಿವಿಯ ದೈಹಿಕ ಶಿಕ್ಷಣ ವಿಭಾಗವು ಕೆಐಐಟಿಗೆ ಸಂಪೂರ್ಣ ಹಣ ಸಂದಾಯ ಮಾಡಿದೆ. ಆಗಾಗಿ ಧನುಷಾ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಪೂರ್ಣ ನೆರವು ನೀಡಲಾಗಿದೆ ಎಂದು ತಿಳಿಸಲಾಗಿದೆ.

ಆಯ್ಕೆಯಾದ ಭಾರತದ ಕ್ರೀಡಾಪಟುಗಳಲ್ಲಿ ಒರಿಸ್ಸಾದ ಭುವನೇಶ್ವರದ ಕಳಿಂಗಾ ಇನ್ಸಿಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟ್ರೈನಿಂಗ್ ವಿವಿಯಲ್ಲಿ ತರಬೇತಿ ಶಿಬಿರವನ್ನು ನಡೆಸಲಾಗುವುದು. ಸಂಕಷ್ಟರಹಿತವಾಗಿ ವಿಶ್ವ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಲೆಂದು ಮೈಸೂರು ವಿವಿಯ ಆಡಳಿತ ವರ್ಗ ತನ್ನ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಪಿ.ಕೃಷ್ಣಪ್ಪ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: