ಮೈಸೂರು

ಸುದ್ದಿ ಸಂಕ್ಷಿಪ್ತ

ವಾರ್ಷಿಕ ಮಹಾಸಭೆ
ಜೆ.ಎಸ್.ಎಸ್. ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿರ್ಮಾಣ ಸಹಕಾರ ಸಂಘದ 2015-16 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ನಿವೃತ್ತ ಐ.ಪಿ.ಎಸ್ ಅಧಿಕಾರಿ ಎಲ್.ರೇವಣ್ಣಸಿದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸೆ.25 ರ ಬೆ. 11 ಗಂಟೆಗೆ ಏರ್ಪಡಿಸಲಾಗಿದೆ.

ಪೂರ್ವಭಾವಿ ಸಭೆ
ಮೈಸೂರಿನ ಕರ್ನಾಟಕ ರಾಜ್ಯ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟವು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಗುರುಪೀಠ ಸ್ಥಾಪನೆ ಮತ್ತು ನಾಯಕ ಜನಾಂಗದ ಕುಂದುಕೊರತೆಗಳನ್ನು ಚರ್ಚಿಸಲು ಸೆ.25 ರ ಬೆ.11 ಗಂಟೆಗೆ ನಗರದ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ಆಯ್ಕೆ
ವಿಶ್ವ ಹಿಂದೂ ರಕ್ಷಣಾ ಸೇನಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಕಿರಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರನ್ ತಿಳಿಸಿದ್ದಾರೆ. ಸಮಿತಿಯ ಸದಸ್ಯರು ಅವರಿಗೆ ಶುಭ ಕೋರಿದ್ದಾರೆ.
ಕಾವೇರಿಗಾಗಿ ಮೌನ ಪ್ರತಿಭಟನೆ
ಎಂ.ಪಿ. ಬಸವರಾಜು ಗೆಳೆಯರ ಬಳಗದ ವತಿಯಿಂದ ಕಾವೇರಿ ನೀರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸೆ.23 ರ ಸಂಜೆ 6 ಗಂಟೆಗೆ ಸರಸ್ವತಿಪುರಂನ ನಗರ ಕೇಂದ್ರ ಗ್ರಂಥಾಲಯದ ಬಳಿ ಮೌನವಾಗಿ ಮೋಂಬತ್ತಿ ಉರಿಸುವುದರ ಮೂಲಕ ಪ್ರತಿಭಟನೆ ಮಾಡಲಿದ್ದಾರೆ.

Leave a Reply

comments

Related Articles

error: