Uncategorizedಮೈಸೂರು

ಫೆ.3 ರಿಂದ ಸ್ವದೇಶಿ ಮೇಳ

ಸ್ವದೇಶಿ ಜಾಗರಣ ಮಂಚ್ ಸಂಸ‍್ಥೆ ವತಿಯಿಂದ ಫೆ.3,4 ಮತ್ತು 5 ರಂದು ನಂಜರಾಜಬಹದ್ದೂರ್ ಛತ್ರದಲ್ಲಿ ಸ್ವದೇಶಿ ಮೇಳವನ್ನು ಏರ್ಪಡಿಸಲಾಗಿದೆ ಎಂದು ಸ್ವದೇಶಿ ಮೇಳದ ಸಂಯೋಜಕ ಪ್ರಸನ್ನ ಎನ್ ಗೌಡ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 3 ರಂದು ಬೆಳಿಗ್ಗೆ 10 ಗಂಟೆಗೆ ನಟ ಮತ್ತು ನಿರ್ದೇಶಕ ಮಂಡ್ಯ ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸ್ವದೇಶಿ ಜಾಗರಣ ಮಂಚ್ ನ ರಾಷ್ಟ್ರೀಯ ಸಹ ಸಂಯೋಜಕ ಪ್ರೊ.ಬಿ.ಎಂ.ಕುಮಾರಸ್ವಾಮಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು. ಅಂದು ಮಧ್ಯಾಹ್ನ.2.30 ಕ್ಕೆ ಆರೋಗ್ಯ ಶಿಬಿರ, ಮಧ್ಯಾಹ್ನ 3 ಗಂಟೆಗೆ ಪ್ರಬಂಧ ಸ್ಪರ್ಧೆ, ಸಂಜೆ 6 ಗಂಟೆಗೆ ಭಾರತೀಯ ವಿಕಾಸದ ಮಾದರಿ ಉಪನ್ಯಾಸವಿರುತ್ತದೆ.

ಫೆ.4 ರಂದು ಬೆಳಿಗ್ಗೆ 10.30 ಕ್ಕೆ ರೈತರ ಸಮಾವೇಶ, ಮಧ್ಯಾಹ್ನ .2.30 ಕ್ಕೆ ಚಿತ್ರಕಲಾ ಸ್ಪರ್ಧೆ, ಸಂಜೆ 6 ಗಂಟೆಗೆ ವಿವಿಧ ಮುಖಗಳಲ್ಲಿ ಚೈನಾ ಆಕ್ರಮಣ, ಸಂಜೆ 7.15 ಕ್ಕೆ ಜಾನಪದ ಸಂಜೆ ಕಾರ್ಯಕ್ರಮವಿರುತ್ತದೆ.

ಫೆ.5 ರಂದು ಬೆಳಿಗ್ಗೆ .10.30 ಕ್ಕೆ ಸ್ವಯಂ ಉದ್ಯೋಗ ತರಬೇತಿ, ಮಧ್ಯಾಹ್ನ 2.30 ಕ್ಕೆ ಆಯುರ್ವೇದ ಶಿಬಿರ, ಸಂಜೆ 6 ಗಂಟೆಗೆ ಸ್ವದೇಶಿ ಆಂದೋಲನದಲ್ಲಿ ನಮ್ಮ ಪಾತ್ರ, 7.15 ಕ್ಕೆ  ಯಕ್ಷಗಾನ ‘ರುಕ್ಮಿಣಿ ಕಲ್ಯಾಣ’ ಕಾರ್ಯಕ್ರಮವಿರುತ್ತದೆ ಎಂದು ಹೇಳಿದರು.

ಭಾರತೀಯ ಪರಂಪರೆಯ ಉಡುಗೆಯಾದ ಸೀರೆಯನ್ನು ಉಟ್ಟು ಸ್ವದೇಶಿ ಮೇಳಕ್ಕೆ ಬರುವ ಮಹಿಳೆಯರಿಗೆ ಲಕ್ಕಿ ಡಿಪ್ ಮೂಲಕ ಸೌಭಾಗ್ಯವತಿ ಸೀರೆಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸ್ವದೇಶಿ ಮೇಳದ ಸಂಯೋಜಕರಾದ ಜಗದೀಶ್, ಶ್ರೀವತ್ಸ, ಮಂಜುನಾಥ್ ಹಾಜರಿದ್ದರು.

 

Leave a Reply

comments

Related Articles

error: