ಪ್ರಮುಖ ಸುದ್ದಿಮೈಸೂರು

‘ವೈವಿದ್ಯ ಜ್ಯುವೆಲ್ಸ್’ ನೂತನ ಮಳಿಗೆಗೆ ನಾಳೆ ‘ದಿಗಂತ್ ಐಂದ್ರಿತಾ ರೈ’ ರಿಂದ ಚಾಲನೆ

ಮೈಸೂರು,ಏ.30 : ವಿನೂತನ ಹಾಗೂ ಪಾರಂಪರಿಕ ಆಭರಣ ತಯಾರಿಕೆಗಳಲ್ಲಿ ಹೆಸರುವಾಸಿಯಾಗಿರುವ ‘ವೈವಿದ್ಯ ಜ್ಯುವೆಲ್ಸ್’ ನ ನೂತನ ಮಳಿಗೆಯನ್ನು ಮೇ.1ರಂದು ನಗರದ ಬಿ.ಎನ್.ರಸ್ತೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಾರುಕಟ್ಟೆ ಮುಖ್ಯಸ್ಥ ಪರ್ವೀಸ್ ತಿಳಿಸಿದರು.

ಮೇ.1ರಂದು ಬೆಳಗ್ಗೆ 11.30ಕ್ಕೆ ತಾರಾ ದಂಪತಿಯಾದ ದಿಗಂತ್ ಹಾಗೂ ಐಂದ್ರಿತಾ ರೈ ಅವರು ನೂತನ ಮಳಿಗೆಗೆ ಚಾಲನೆ ನೀಡುಲಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಆಭರಣ ತಯಾರಿಕೆಯಲ್ಲಿ ಅನುಭವವುಳ್ಳ ತಮ್ಮ ತಂಡವು ಪ್ರಸಿದ್ಧ ಚಿನ್ನ ಮತ್ತು ಆಭರಣಗಳನ್ನು ದೇಶದ್ಯಂತ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದು, ಈಗ ತಮ್ಮ ಸ್ವಂತ ತಯಾರಿಕ ಘಟಕವು ಮಳಿಗೆ ತೆರೆಯುವ ಮೂಲಕ ಗ್ರಾಹಕರಿಗೆ ಉತ್ತಮ ಲಾಭವನ್ನು ಒದಗಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲ್ಲದೇ ಅಕ್ಷಯ ತೃತೀಯ ಅಂಗವಾಗಿ ಪ್ರತಿ ಗ್ರಾಂಗೂ 200 ರೂ.ಗಳ ರಿಯಾಯಿರಿ, ಬೆಳ್ಳಿಯ ವಸ್ತುಗಳ ಉಡುಗೊರೆಯನ್ನು ನೀಡಲಾಗುವುದು ಹಾಗೂ ಮುಂಗಡ ಬುಕ್ಕಿಂಗ್ ಸಹ ತೆರೆಯಲಾಗಿದೆ, ಶೇ.100ರಷ್ಟು ಬಿಐಎಸ್ ಹಾಲ್ ಮಾರ್ಕ್ ಚಿನ್ನಾಭರಣ, ಐಜಿಐ ಮತ್ತು ಜಿಐಎ ಸರ್ಷಿಫಿಕೇಟ್ ಹೊಂದಿರುವ ವಜ್ರಾಭರಣಗಳು, 92.5 ಟೆಚ್ ಹೊಂದಿರುವ ಬೆಳ್ಳಿಯ ಆಭರಣ, ಪ್ಲಾಟಿನಂ, ಬೆಲೆಬಾಳುವ ಹರಳುಗಳನ್ನೊಂದಿರುವ ಅತ್ಯಾಕರ್ಷಕ ಡಿಸೈನ್ ಆಭರಣಗಳು ಲಭ್ಯವಿರಲಿದೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕರಾದ ನಿಯಾಜ್, ಷಜಹಾನ್, ವ್ಯವಸ್ಥಾಪಕರಾದ ಸುರೇಶ್, ಫ್ರಾನ್ಸಿಸ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: