ಮೈಸೂರು

ಸೌಂದರ್ಯ ಲಹರಿ : ಮನೆ ಮನೆ ಆಮಂತ್ರಣ

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಫೆಬ್ರವರಿ 4 ರಂದು ಬೆಳಗ್ಗೆ 8ರಿಂದ  ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಸೌಂದರ್ಯಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ನಡೆಯಲಿದೆ.

ಹಿಂದೂಪರ ಮಹಿಳಾ ವೇದಿಕೆಯ ಕಾರ್ಯಕರ್ತರು ಶಂಕರಮಠದ  ಮುಂಭಾಗದಿಂದ ಮನೆಮನೆಗೆ  ತೆರಳಿ ಸೌಂದರ್ಯಲಹರಿ ಪಾರಾಯಣದ ಆಮಂತ್ರಣವನ್ನು ಅತಿವಿಶೇಷವಾಗಿ ಹಿಂದೂಪರ ಮಹಿಳಾ ವೇದಿಕೆಯ ಸದಸ್ಯರು ಪ್ರತಿ ಮನೆಮನೆಗೆ ತೆರಳಿ  ಅರಿಶಿನ-ಕುಂಕುಮ ಬಾಗಿನದೊಂದಿಗೆ ಆಮಂತ್ರಣವನ್ನು ನೀಡಿ  ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ  ಭಾಗವಹಿಸಬೇಕೆಂದು ಆಹ್ವಾನಿಸಿದರು.

ಹೆಚ್.ವಿ ರಾಜೀವ್ ಮಾತನಾಡಿ ಸಾಂಸ್ಕೃತಿಕ ರಾಜಧಾನಿಯಲ್ಲಿ  ಸಹಸ್ರಾರು ಭಕ್ತಸಮೂಹದೊಂದಿಗೆ ಸೌಂದರ್ಯ ಪಾರಾಯಣ ನಡೆಯುತ್ತಿರುವುದು ಪುಣ್ಯದ ಕೆಲಸ, ಧಾರ್ಮಿಕತೆಯ ವಿಶೇಷತೆ ಸನಾತನ ಧರ್ಮದ ಮಹತ್ವವನ್ನು ತಿಳಿಸಿಕೊಡಲಾಗುವುದು ಹಾಗೂ  ಸೌಂದರ್ಯಲಹರಿಯನ್ನು ದೇಶದ ಭವಿಷ್ಯ ರೂಪಿಸುವ ಶಾಲಾಮಕ್ಕಳು, ಮಹಿಳೆಯರು ಭಜನಾ ಮಂಡಳಿಗಳಿಂದ ಏಕಕಂಠದಲ್ಲಿ ಪಠಿಸುವ ಮೂಲಕ ಇತಿಹಾಸ ನಿರ್ಮಿಸಲಿದ್ದು ಇದನ್ನು ಕಣ್ತುಂಬಿಕೊಳ್ಳಲ್ಲು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗರು ಭಾಗವಹಿಸಬೇಕೆಂದು ಕರೆ ನೀಡಿದರು. ಈ ಸಂದರ್ಭ  ಬಿಜೆಪಿ ನಗರಾಧ್ಯಕ್ಷರಾದ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ವಿ ರಾಜೀವ್, ನಂದೀಶ್ ಪ್ರೀತಂ, ರಾಜೇಶ್, ಸತೀಶ್, ಬಿಜೆಪಿ ಮುಖಂಡ ಕೌಟಿಲ್ಯ ರಘು ಮತ್ತು ಕೆ.ಆರ್ ಮೋಹನ್ ಕುಮಾರ್,  ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜು, ಹಿಂದೂ ಮಹಿಳಾ ವೇದಿಕೆಯ ಅಧ್ಯಕ್ಷೆ ಲಕ್ಷ್ಮಿ ದೇವಿ, ಭಾಗೀರತಿ, ವಿಜಯಲಕ್ಷ್ಮಿ, ಸರಸ್ವತಿ ಪ್ರಸಾದ್, ಆಶಾ, ರತ್ನ, ದಿವ್ಯ, ಲಕ್ಷ್ಮಿ, ಸುನಂದ, ಜಯ, ಭಾಗ್ಯ ಮತ್ತಿತರರು ಭಾಗವಹಿಸಿದ್ದರು. ಹೆಚ್ಚಿನ ಮಾಹಿತಿಗಾಗಿ  9448938721 ಸಂಪರ್ಕಿಸಬಹುದು.

Leave a Reply

comments

Related Articles

error: