ಕರ್ನಾಟಕಮೈಸೂರು

ಕಾವೇರಿ ನದಿ ವಿವಾದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಮಧ‍್ಯಪ್ರವೇಶ ಅಗತ್ಯ : ಸಿ.ಪಿ.ಐ. ಆಗ್ರಹ

ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಇದ್ದರೂ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡುವಂತೆ ತೀರ್ಪು ನೀಡಿರುವುದು ಘೋರ ಅನ್ಯಾಯವಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮೂಕಪ್ರೇಕ್ಷಕನಂತೆ ವರ್ತಿಸುತ್ತಿದೆ. ರಾಜ್ಯದ ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು, ಎರಡು ರಾಜ್ಯಗಳ ನಡುವೆ ಹೆಚ್ಚುತ್ತಿರುವ ವೈಮನಸ್ಸನ್ನು ಹೋಗಲಾಡಿಸಲು ಈಗಲಾದರೂ ಪ್ರಧಾನಮಂತ್ರಿಗಳು ಮಧ್ಯೆ ಪ್ರವೇಶಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಆಗ್ರಹ ಮಾಡಿದೆ.

ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಸೆ.21 ರಂದು ನಡೆದ ಸರ್ವ ಪಕ್ಷಗಳ ಸಭೆಯ ಒಮ್ಮತದ ನಿರ್ಧಾರವನ್ನು ಜಾರಿ ಮಾಡಲು ಸಚಿವ ಸಂಪುಟ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಸರ್ವಪಕ್ಷಗಳ ಸಭೆಗೆ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಹಾಜರಾಗದೆ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ತನ್ನ ರಾಜ್ಯ ವಿರೋಧಿ ಧೋರಣೆಯನ್ನು ಬಯಲು ಮಾಡಿಕೊಂಡಿದೆ ಎಂದು ಸಿಪಿಐ ಟೀಕಿಸಿದೆ.

ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ರಾಜ್ಯ ಸಮಿತಿ ಸೆ. 5 ರಂದು ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ನೀರು ಬಿಡಬಾರದೆಂದು ಕರ್ನಾಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿತ್ತು.

Leave a Reply

comments

Related Articles

error: