
ಮೈಸೂರು
ದ್ರೋಣ ಆನೆ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಅರಮನೆ ಬಾಗಿಲಲ್ಲಿ ಮಲಗಿ ವಾಟಾಳ್ ನಾಗರಾಜ್ ಪ್ರತಿಭಟನೆ
ಮೈಸೂರು,ಮೇ.1:- ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಆನೆ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಅರಮನೆ ಬಾಗಿಲಲ್ಲಿ ಮಲಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಪ್ರತಿಭಟನೆ ನಡೆಸಿದರು.
ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು ಅರಮನೆ ಬಾಗಿಲಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಅವರು ಆನೆಗಳನ್ನು ದಸರಾ ಸಂದರ್ಭದಲ್ಲಿ ಮಾತ್ರ ಚೆನ್ನಾಗಿ ಪೋಷಣೆ ಮಾಡಿ ಪೋಷಕಾಂಶಗಳ ಆಹಾರ ನೀಡಿ ನೋಡಿ ಕೊಳ್ಳುತ್ತಾರೆ. ದ್ರೋಣ ಆನೆ ಸಾಯುವ ಸಮಯದಲ್ಲಿ ಯಾವ ರೀತಿ ಆಹಾರ ನೀಡಿದರು ಹಾಗೂ ಯಾವ ರೀತಿ ನೋಡಿ ಕೊಳ್ಳುತ್ತಿದ್ದರು ಎಂಬುದರ ಸಮಗ್ರ ತನಿಖೆ ನಡೆಸಬೇಕು.ಅದೇ ರೀತಿ ಬಂಡೀಪುರ ರಸ್ತೆ ನಿಷೇಧವನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ವೈನಾಡಿನಲ್ಲಿ ರಾಹುಲ್ ಗಾಂಧಿಯವರು ರಸ್ತೆ ನಿಷೇಧವನ್ನು ತೆಗೆಸುತ್ತೇನೆ ಎಂದು ಹೇಳಿರುವುದು ಸರಿಯಾದ ಕ್ರಮ ಅಲ್ಲ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)