ಮೈಸೂರು

ವಿದ್ಯುತ್ ನಿಲುಗಡೆ

ಮೈಸೂರು ಮೇ.2:-  ಎನ್.ಆರ್ ಮೊಹಲ್ಲಾ ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮೇ 2 ರಂದು ಗುರುವಾರ ಬೆಳಿಗ್ಗೆ 10:30 ರಿಂದ ಸಂಜೆ 6 ಘಂಟೆಯವರೆಗೆ 66/11 ಕೆವಿ ಕಲಾಮಂದಿರ ಜಿ.ಐ.ಎಸ್. ಕೇಂದ್ರ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ 11 ಕೆ.ವಿ. ಡಿ.ಡಿ. ಅರಸ್ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಕಛೇರಿ, ಕ್ರಾಫರ್ಡ್ ಹೌಸ್, ವಿಶ್ವವಿದ್ಯಾನಿಲಯ, ಯುವರಾಜ ಕಾಲೇಜು, ಕೋರಮ್ ಹೋಟೆಲ್, ಮಹಾರಾಜ ಕಾಲೇಜ್, ಲೋಕಕಲ್ಯಾಣ ಕಛೇರಿ, ಡಿ.ಡಿ. ಅರಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆದುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಎನ್.ಆರ್ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: