ಮೈಸೂರು

ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆ ವಿವಾಹಕ್ಕೆ ಒತ್ತಾಯಿಸಿದಾಗ ಬೈಕ್ ನಿಂದ ತಳ್ಳಿ ನಾಪತ್ತೆಯಾದ ಯುವಕನ ವಿರುದ್ಧ ದೂರು

ಮೈಸೂರು,ಮೇ.2:- ವಿವಾಹವಾಗಬೇಕೆಂದರೆ ದೈಹಿಕ ಸಂಪರ್ಕ ಬೆಳೆಸಬೇಕೆಂದು ಬೆದರಿಸಿ, ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆ ವಿವಾಹಕ್ಕೆ ಒತ್ತಾಯಿಸಿದಾಗ ಮದುವೆಯಾಗುತ್ತೇನೆಂದು ಕರೆದೊಯ್ದು, ಹೂಟಗಳ್ಳಿ ಬಳಿ ಬೈಕ್ ನಿಂದ ತಳ್ಳಿ ಯುವಕ ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಾಂಪುರ ಮಹದೇವಪುರ 5ನೇ ಕ್ರಾಸ್ ನಿವಾಸಿ ಪಲ್ಲವಿ ಎಂಬ ಯುವತಿಯೇ ಯುವಕನಿಂದ ಮೋಸ ಹೋದವರಾಗಿದ್ದಾರೆ. ಇವರು ಚಾಮರಾಜನಗರದ ಜ್ಯೋತಿಗೌಡನಪುರದ ಮಲ್ಲೇಶ್ ಎಂಬವರ ಪುತ್ರ ಮನು ಎಂಬಾತನನ್ನು ಕಳೆದ ಮೂರು ವರ್ಷಗಳಿಂದ  ಪ್ರೀತಿಸುತ್ತಿದ್ದರು. ಆತ ಯುವತಿಯ ಮನೆಯ ಎದುರಿನಲ್ಲೇ ವಾಸವಿದ್ದ. ಬಳಿಕ ಹೆಬ್ಬಾಳದಲ್ಲಿ ವಾಸವಿದ್ದ ಆತನ ಸ್ನೇಹಿತ ನಾಗು ಎಂಬವರ ಮನೆಗೆ 8/12/2018ರಲ್ಲಿ ಕರೆದುಕೊಂಡು ಬಂದಿದ್ದು, ನಾಗು ನಾವು ಆ ರೂಮ್ ಗೆ ಬಂದ ನಂತರ ಅಲ್ಲಿಂದ ತೆರಳಿದ್ದರು. 25/3/2019ರವರೆಗೆ ನನ್ನನ್ನು ಆ ರೂಮಿನಲ್ಲಿಯೇ ಇರಿಸಿಕೊಂಡಿದ್ದು ನೀನು ನನ್ನೊಡನೆ ದೈಹಿಕ ಸಂಪರ್ಕಕ್ಕೆ ಒಪ್ಪಬೇಕು. ಇಲ್ಲದಿದ್ದಲ್ಲಿ ಮದುವೆ ಆಗುವುದಿಲ್ಲ ಎಂದು ಬೆದರಿಸುತ್ತಿದ್ದ. 23/03/2019ರಂದು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮೇಲೆ ಹಲ್ಲೆ ನಡೆಸಿ ದೈಹಿಕ ಸಂಪರ್ಕ ಬೆಳೆಸಿದ್ದು, ಗರ್ಭಧಾರಣೆಯಾಗದ ಮಾತ್ರೆಗಳನ್ನು ಬಲವಂತವಾಗಿ ತಿನ್ನಿಸಿದ್ದ. ಬಳಿಕ ವಿವಾಹವಾಗದೇ ಕಾಲಹರಣ ಮಾಡುತ್ತಿದ್ದೀಯಲ್ಲ ಎಂದು ಪ್ರಶ್ನಿಸಿದಾಗ 25/03.2019ರಂದು ರಾತ್ರಿ 9.30ರ ಸುಮಾರಿಗೆ ನನ್ನೊಂದಿಗೆ ಬಾ ನಾವಿಬ್ಬರು ಧರ್ಮಸ್ಥಳಕ್ಕೆ ಹೋಗೋಣ. ಅಲ್ಲಿ ವಿವಾಹವಾಗುತ್ತೇನೆ ಎಂದು ಬೈಕ್ ನಲ್ಲಿಯೇ ಕರೆದೊಯ್ದಿದ್ದು, ಹೂಟಗಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಬೈಕ್ ನಿಂದ ನನ್ನನ್ನು ತಳ್ಳಿ ನಮ್ಮಿಬ್ಬರ ನಡುವೆ ನಡೆದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದಾನೆ. ಇದುವರೆಗೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: