ಪ್ರಮುಖ ಸುದ್ದಿಮೈಸೂರು

ಬ್ಯಾಂಕ್ ನೌಕರಿ ಕೊಡಿಸುವುದಾಗಿ ಹಣ ಪಡೆದು ವಂಚನೆ : ಆರೋಪ

ನೊಂದ ಮಹಿಳೆಯಿಂದ ನ್ಯಾಯಕ್ಕೆ ಒತ್ತಾಯ

ಮೈಸೂರು,ಮೇ.2 : ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪೀಕಿ ವಂಚಿಸಿರುವ ವಂಚಕರ ಜಾಲವೊಂದು ನಗರದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಡೆಸುತ್ತಿದ್ದು ಆ ಬಗ್ಗೆ ಎಚ್ಚರವಾಗಿರಿ ಎಂದು ನೊಂದ ಮಹಿಳೆಯೊಬ್ಬಳು ಅಲವತ್ತುಕೊಂಡಳು.

ಚಾಮುಂಡಿಪುರಂ ಹಾಗೂ ಜೆ.ಪಿ.ನಗರ ನಿವಾಸಿಗಳಾದ ಕಾವ್ಯ, ರಮಾಮಣಿ, ಶಿವಶಂಕರ್, ಅಜಯ್, ಶಾಲಿನಿ ಮತ್ತಿತರ ಬ್ಯಾಂಕ್ ನೌಕರಿ ಕೊಡಿಸುವುದಾಗಿ ಸುಮಾರು 5 ಲಕ್ಷ ರೂ.ಗಳನ್ನು ಲಪಟಾಯಿಸಿದ್ದು, ಅವರುಗಳ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಆದ್ದರಿಂದ ಶೀಘ್ರದಲ್ಲಿಯೇ ತಮಗೆ ನ್ಯಾಯ ಒದಗಿಸಬೇಕೆಂದು ನೊಂದ ಮಹಿಳೆ ಪವಿತ್ರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಳೆದೆರಡು ವರ್ಷದ ಹಿಂದೆ ಹಣ ನೀಡಿದ್ದು ಇದುವರೆಗೂ ನೌಕರಿಯನ್ನು ಕೊಡಿಸಿಲ್ಲ ಹಾಗೂ ಹಣವನ್ನು ಮರಳಿಸಿಲ್ಲ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು ವಂಚಕರ ವಿರುದ್ಧ ಕ್ರಮ ಕೈಗೊಂಡಿಲ್ಲ, ಆದ್ದರಿಂದ ತಮಗೆ ತೀವ್ರ ತೊಂದರೆಯಾಗಿದ್ದು ನನ್ನಂತೆ ಹಲವರಿಂದ ಹಣವನ್ನು ಲಪಟಾಯಿಸಿರುವ ಇವರುಗಳು ಸುಶಿಕ್ಷಿತ ನಿರುದ್ಯೋಗಿಗಳನ್ನೇ ಗುರಿಯಾಗಿಸಿ ವಂಚಿಸುತ್ತಿದ್ದು ಈಗಾಗಲೇ ಸುಮಾರು ಕೋಟಿಗಟ್ಟಲೇ ಹಣವನ್ನು ವಂಚಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಇಂತಹ ವಂಚಕರ ಬಗ್ಗೆ ಇತರರು ಎಚ್ಚರಿಕೆ ವಹಿಸಬೇಕೆಂದು ಕೋರಿದರು.

ನೊಂದವರಾದ ಮಹೇಶ್, ಕಾಂತರಾಜ್, ಚಿದಂಬರ್, ವಕೀಲರಾದ ಹರೀಶ್ ಗೌಡ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: