ಪ್ರಮುಖ ಸುದ್ದಿಮೈಸೂರು

ಎನ್.ಐ.ಇ ಸಂಸ್ಥೆಯಿಂದ ಅಲ್ಪಾವಧಿ ಕೌಶಲ್ಯ ತರಬೇತಿ : ಅರ್ಜಿ ಆಹ್ವಾನ

ಮೈಸೂರು, ಮೇ.2 : ಎನ್.ಐ.ಇ ಶಿಕ್ಷಣ ಸಂಸ್ಥೆಯು ರಾಷ್ಟ್ರೀಯ ಕೌಶಲ್ಯ ತರಬೇತಿ (NSDC)ಆಡಿಯಲ್ಲಿ ಎನ್.ಐ.ಇ. -ಭಾಷ ಕೌಶಲ್ಯ ತರಬೇತಿ ಕೇಂದ್ರ ಮೈಸೂರಿನ 3ನೇ ಹಂತ ಜೋಡಿ ಬೇವಿನ ಮರ ರಸ್ತೆ  ತ್ರಿವೇಣಿ ಸರ್ಕಲ್ ಬಳಿಯ ದಟ್ಟಗಳ್ಳಿಯಲ್ಲಿ ಕೌಶಲ್ಯ ತರಬೇತಿಯನ್ನು ನಡೆಸಲಾಗುವುದು ಎಂದು ಎನ್ ಐ ಇ ಸೊಸೈಟಿಯ  ಕಾರ್ಯದರ್ಶಿ ಜಿ ಎಸ್ ರಾಮಚಂದ್ರ ತಿಳಿಸಿದ್ದರು.

ಅಲ್ಪಾವಧಿ ಕೌಶಲ್ಯ ತರಬೇತಿಯನ್ನು ಪ್ರಾರಂಭಿಸಿ, ಜರ್ಮನಿ ಮೂಲದ ಬಾಷ್ ಸಹಯೋಗದಲ್ಲಿ ಮರಗೆಲಸ ತರಬೇತಿ, ಎಲೆಕ್ಟ್ರಿಕಲ್ ವೈರ್ ಮೆನ್, ಹಾರ್ಡವೇರ್ ನೆಟ್ ವರ್ಕಿಂಗ್, ಅಟೋಮೋಟಿವ್ ಸರ್ವಿಸ್ ಟೆಕ್ನಿಷಿಯನ್, ರೆಪ್ರಿಜರೇಟರ್, ಏಸಿ ಮತ್ತು ವಾಷಿಂಗ್ ಮಿಶನ್ ರಿಪೇರಿಯನ್ನು ಮೂರು ಮತ್ತು ಆರು ತಿಂಗಳ ತರಬೇತಿಯನ್ನು ನೀಡಲಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದೆಂದರು.

ಹಲವಾರು ದಶಕಗಳಿಂದ ಶಿಕ್ಷಣ ಸೇವೆಯಲ್ಲಿ ನಿರತವಾಗಿದ್ದು ಅತ್ಯುತ್ತಮ ಇಂಜಿನಿಯರಿಂಗ್ ನಿರ್ಮಾಣ ಮಾಡಿ ರಾಷ್ಟ್ರಕ್ಕೆ ಮತ್ತು ವಿಶ್ವಕ್ಕೆ ಕೊಡುಗೆ ನೀಡಿದ್ದು ಸಂಸ್ಥೆಯಿಂದ ಅಪಾರ ಸಂಖ್ಯೆಯ ಬಡ,ಮಧ್ಯಮ,ಹಿಂದುಳಿದ,ದೀನದಲಿತ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಎಲ್ಲಾ ಸಮಾಜದ ಯುವಕರುಗಳಿಗೆ ಕೈಗಾರಿಕೆ ತರಬೇತಿ ನೀಡುವುದರ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿ ಮತ್ತು ಸ್ವಯಂ ಉದ್ಯೋಗಿಗಳನ್ನಾಗಿಸುವ ಮಹೋನ್ನತ ಕಾರ್ಯವನ್ನ ನಡೆಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಗೆ ಕ್ಯಾಂಪಸ್ ಇಂಟರ್ ವಿಯ್ಯೂ ನಡೆಸಲು ಕಂಪನಿಗಳಾದ TVS TOYOTO KIRLOSKAR. BOSCH.AUTOMOTIVE AXELS.RICHO.ITC. EICHER.ಇನ್ನೂ ಹಲವಾರು ಪ್ರಮೂಕ ಕಂಪನಿಗಳು ಬರುತ್ತಿವೆ. ಅಲ್ಲದೆ ಮೈಸೂರಿನಲ್ಲಿರುವ ಬಹುಕೇಕ ಕಂಪನಿಗಳಲ್ಲಿ ನಮ್ಮ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಉದ್ಸೋಗಿಗಳಾಗಿದ್ದಾರೆ. ಉಳಿದವರು ಸ್ವಯಂ ಉದ್ಯೋಗಿಗಳಾಗಿದ್ದು ಬಹಳಷ್ಟು ನಿರುದ್ಸೋಗಿಗಳಿಗೆ ಉದ್ಯೋಗಾವಕಾಶವನ್ನು ತಮ್ಮ ಕೈಗಾರಿಕೆಗಳಲ್ಲಿ ಕಲ್ಪಿಸಲಾಗಿದ್ದಾರೆ ಎಂದರು.

ಸಂಸ್ಥೆ ನಿರ್ದೇಶಕ ಎಸ್.ಎಲ್.ರಾಮಚಂದ್ರ, ಪ್ರಭಾರೆ ಪ್ರಾಂಶುಪಾಲರಾದ ಎ.ಆರ್.ಮಲ್ಲರಾಜೇ ಅರಸ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: