ಕರ್ನಾಟಕ

ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ ಮಾಸ್ಟರ್ ಕಿಶನ್

ಬೆಂಗಳೂರು,ಮೇ 2-ಹಿರಿಯ ರಂಗಕರ್ಮಿ, ನಟ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಹಿರಣ್ಣಯ್ಯ ಅವರ ನಿಧನಕ್ಕೆ ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ.

ಇದೀಗ ನಟ, ನಿರ್ದೇಶಕ ಮಾಸ್ಟರ್ ಕಿಶನ್, ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಾಲ್ಯದಲ್ಲಿಯೇ ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಿರ್ದೇಶನ ಮಾಡುವ ಅದ್ಭುತ ಅವಕಾಶವನ್ನು ಕಿಶನ್ ಪಡೆದಿದ್ದರು. ಆ ಸಮಯದಲ್ಲಿ ಮಾಸ್ಟರ್ ಹಿರಣ್ಣಯ್ಯ ರವರ ಜೊತೆಗೆ ಕಳೆದ ಸಮಯವನ್ನು ನೆನಪು ಮಾಡಿಕೊಂಡಿದ್ದಾರೆ.

‘ಮಾಸ್ಟರ್ ಹಿರಣ್ಣಯ್ಯ ತಾತ ಅದ್ಭುತ ವ್ಯಕ್ತಿ. ಪಾಪಾ ಪಾಂಡು ಧಾರಾವಾಹಿಯಿಂದ ಹಿಡಿದು, ಕೇರ್ ಆಫ್ ಪುಟ್ ಬಾತ್ 2 ಸಿನಿಮಾದಲ್ಲಿಯೂ ಅವರ ಜೊತೆಗೆ ಕೆಲಸ‌ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ಹೆಸರಿನಲ್ಲಿಯೂ ‘ಮಾಸ್ಟರ್’ ಎಂದು ‌ಇರುವುದರಿಂದ ಅವರು ನಮ್ಮ ತಾತ ಎಂದು ಅನೇಕರು ಎಂದು ಕೊಂಡಿದ್ದರು. ನಾನು ನಿಮ್ಮ 12th ಜನರೇಷನ್ ತಾತ ಹೇಳುತ್ತಿದ್ದರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಟ್ವಿಟ್ ಮಾಡಿದ್ದಾರೆ.

ನಟ ಸುದೀಪ್,‌ ದರ್ಶನ್, ಗಣೇಶ್, ರಮೇಶ್ ಅರವಿಂದ್,‌ ಸೇರಿದಂತೆ ಸಾಕಷ್ಟು ಕಲಾವಿದರು ಟ್ವಿಟರ್ ನಲ್ಲಿ ಮಾಸ್ಟರ್ ಹಿರಣ್ಣಯ್ಯರಿಗೆ ಸಂತಾಪ ಸೂಚಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: