ಮೈಸೂರು

ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ ಮೃಗಾಲಯ : ಸಿಬ್ಬಂದಿಗಳಲ್ಲಿ ಸಂಭ್ರಮ

125 ವರ್ಷಗಳ ಇತಿಹಾಸವಿರುವ ಮೈಸೂರು ಮೃಗಾಲಯಕ್ಕೆ  H5N8 ವೈರಸ್‌ನಿಂದಾಗಿ ಜನವರಿ 4ರಿಂದ  ಒಂದು ತಿಂಗಳಕಾಲ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿತ್ತು.  ಇದೀಗ ಸಂಪೂರ್ಣ ವೈರಸ್ ಮುಕ್ತ ಎಂಬ ಹಿನ್ನೆಲೆಯಲ್ಲಿ  ಶುಕ್ರವಾರ (ನಾಳೆ)ಪ್ರವೇಶಕ್ಕೆ ಮುಕ್ತಗೊಳ್ಳಲಿದೆ.

ಮೃಗಾಲಯದ ಹೊರ ಆವರಣ ಮತ್ತು ಒಳ ಆವರಣಗಳನ್ನು ಶುಚಿಗೊಳಿಸಲಾಯಿತು. ಮೃಗಾಲಯದ ಅಕ್ಕಪಕ್ಕದಲ್ಲಿರುವ  ರೆಸ್ಟೋರೆಂಟ್ ಮತ್ತು ಚಿಕ್ಕಪುಟ್ಟ ವ್ಯಾಪಾರಸ್ಥರು ಸಂಭ್ರಮಿಸುತ್ತಿದ್ದಾರೆ. ಮತ್ತೆ ತಮ್ಮ ವ್ಯಾಪಾರ ವಹಿವಾಟನ್ನು ಆರಂಭಿಸಬಹುದೆನ್ನುವ ಸದುದ್ದೇಶ ಅವರದು.

ಮೃಗಾಲಯದ ಸಿಬ್ಬಂದಿ ಹೇಮಾ ಮಾತನಾಡಿ ಮೃಗಾಲಯ ಸದಾ ಪ್ರವಾಸಿಗರಿಂದ ಗಿಜಿಗುಟ್ಟುತ್ತಿತ್ತು. ಆದರೆ ಕಳೆದೊಂದು ತಿಂಗಳಿನಿಂದ ಜನರಿಲ್ಲದೇ ಬಣಗುಡುತ್ತಿತ್ತು. ಇದೀಗ ಮತ್ತೆ ತೆರೆದುಕೊಳ್ಳುತ್ತಿದ್ದು, ಮತ್ತೆ ಯಾವುದೇ ತೊಂದರೆಗಳು ಕಾಣಿಸಿಕೊಳ್ಳದಿರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಒಟ್ಟಿನಲ್ಲಿ ಮೃಗಾಲಯ ಶುಕ್ರವಾರ(ನಾಳೆ)  ಮತ್ತೆ ತೆರೆದುಕೊಳ್ಳಲಿದ್ದು ಸಿಬ್ಬಂದಿಗಳೂ ಸೇರಿದಂತೆ ಸುತ್ತಮುತ್ತಲಿನವರಲ್ಲಿ ಸಂಭ್ರಮ ಮನೆ ಮಾಡಿದೆ.

Leave a Reply

comments

Related Articles

error: