ದೇಶಪ್ರಮುಖ ಸುದ್ದಿ

ಪ.ಬಂಗಾಳದಲ್ಲಿ ಮತದಾನಕ್ಕೂ ಮುನ್ನವೇ ಹಿಂಸಾಚಾರ! ಓರ್ವ ಯೋಧನ ಹತ್ಯೆ!

ಕೋಲ್ಕತ/ಬಗ್ನನ್ (ಮೇ 2): ಪಶ್ಚಿಮ ಬಂಗಾಳದ ಹೊವ್ರಾಹ್ ಜಿಲ್ಲೆಯ ಬಗ್ನಾನ್ ಎಂಬಲ್ಲಿ ಕೇಂದ್ರ ಭದ್ರತಾ ಪಡೆಯ ಶಿಬಿರದ ಬಳಿ ನಡೆದ ಹಿಂಸಾಚಾರದಲ್ಲಿ ಓರ್ವ ಯೋಧ ಸಾವಿಗೀಡಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ಮೇ 6 ರಂದು ನಡೆಯಲಿರುವ ಐದನೇ ಹಂತದ ಲೋಕಸಭಾ ಚುನಾವಣೆಯ ಸಲುವಾಗಿ ಭದ್ರತಾ ಪಡೆಯನ್ನು ಬಗ್ನನ್ ನಲ್ಲಿ ನಿಯೋಜಿಸಲಾಗಿತ್ತು. ಆದರೆ ಮತದಾನಕ್ಕೆ ನಾಲ್ಕು ದಿನ ಬಾಕಿ ಇರುವಾಗಲೇ ಹಿಂಸಾಚಾರ ತಲೆದೂರಿದ್ದು, ಓರ್ವ ಸೈನಿಕನನ್ನು ಹತ್ಯೆಗೈಯ್ಯಲಾಗಿದೆ. ಅಸ್ಸಾಂ ರೈಫಲ್ಸ್ ನ ಏಳನೇ ಬೆಟಾಲಿಯನ್ನಿನ ಜವಾನ ಭೋಲನಾಥ್ ದಾಸ್ ಎಂಬುವವರೇ ಮೃತರು ಎಂಬುದು ಸಾಬೀತಾಗಿದೆ.

ಯೋಧನನ್ನು ಹತ್ಯೆಗೈದ ಆರೋಪಿಯನ್ನು ಲಕ್ಷ್ಮಿಕಾಂತ ಬುರ್ಮಾನ್ ಎಂದು ಗುರುತಿಸಲಾಗಿದ್ದು, 13 ಬಾರಿ ಆತ ಗುಂಡು ಹಾರಿಸಿದ್ದಾನೆ ಎಂಬುದು ತಿಳಿದುಬಂದಿದೆ. ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲೂ ಚುನಾವಣಾ ಆಯೋಗ ಈಗಾಗಲೇ ಸೂಕ್ಷ್ಮ ಪ್ರದೇಶಗಳು ಎಂದು ಘೋಷಿಸಿದ್ದು, ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಸಾಕಷ್ಟು ಭದ್ರತೆಯ ನಿಯೋಜನೆಯ ನಡುವೆಯೂ ಅಹಿತಕರ ಘಟನೆಗಳು ನಡೆಯುತ್ತಲೇ ಇರುವುದು ಪಶ್ಚಿಮ ಬಂಗಾಳದ ರಾಜಕೀಯ ಪರಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. (ಎನ್.ಬಿ)

Leave a Reply

comments

Related Articles

error: