ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ

ಮೈಸೂರು,ಮೇ.3:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಬೀರುವಿನ ಬಾಗಿಲು ತೆರೆದು ಚಿನ್ನಾಭರಣ ಕದ್ದೊಯ್ದ ಘಟನೆ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತು ನೀಲಮ್ಮ ಎಂಬವರು ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 13-04-2019 ರಂದು ಮಧ್ಯಾಹ್ನ  3ಕ್ಕೆ  ನೀಲಮ್ಮ ಅವರು ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಅವರ ಮನೆಯ ಕೆಲಸದಾಕೆ ಗ್ರೇಸಿಗೆ ಕೊಟ್ಟಿದ್ದು,  30-04-2019 ರಂದು ಮಧ್ಯಾಹ್ನ 12ಕ್ಕೆ ಎಂದಿನಂತೆ ಮನೆ ಕೆಲಸಕ್ಕೆಂದು ಬಂದಾಗ ಮನೆಯ ಮುಂಬಾಗಿಲನ್ನು ತೆರೆಯಲು ಹೋದಾಗ ಅದರ ಪಟ್ಟಿ ಕಳಚಿ ಬಿದ್ದಿತ್ತು. ಅವರು ತಕ್ಷಣ ನೀಲಮ್ಮನವರಿಗೆ ಪೋನ್ ಮಾಡಿ ತಿಳಿಸಿದ್ದು, ಸಂಜೆ ಸುಮಾರು 5.30ರ ಸುಮಾರಿಗೆ ಬಂದು ನೋಡಲಾಗಿ ಮುಂಬಾಗಿಲನ್ನು ಬಲವಾದ ಆಯುಧದಿಂದ ಮೀಟಿ ತೆರೆದು ಒಳಗೆ ಹೋಗಿ ಬೆಡ್ ರೂಂ ನಲ್ಲಿದ್ದ ಬೀರುವಿನ ಬಾಗಿಲನ್ನು ಮೀಟಿ ಲಾಕರ್ ನಲ್ಲಿಟ್ಟಿದ್ದ ಸುಮಾರು 10 ಗ್ರಾಂ ತೂಕದ ಚಿನ್ನ ಚೈನು ಮತ್ತು ಸುಮಾರು 3 ಗ್ರಾಂ ತೂಕದ ಒಂದು ಜೊತೆ ಮಕ್ಕಳ ಓಲೆಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: