ಸುದ್ದಿ ಸಂಕ್ಷಿಪ್ತ

ಬಸವ ಜಯಂತಿ : ಮೇ.5 ರಿಂದ ವಿವಿಧ ಕಾರ್ಯಕ್ರಮಗಳು

ಮೈಸೂರು,ಮೇ.3 : ವೀರಶೈವ ಸಜ್ಜನ ಸಂಘದಿಂದ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಮೇ.5ರಂದು ಕ್ರೀಡೆ, ಮೇ.7ರಂದು ಪೂಜಾ ಹಾಗೂ ದಾಸೋಹ, ಮೇ.12ರಂದು ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಮೆರವಣಿಗೆಯನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮವು ಶ್ರೀಕಂಠಿಮಲ್ಲಣ್ಣನವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್.ಜೈ.ಪ್ರಕಾಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: