ಮೈಸೂರು

ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ -ಧನ್ ಯೋಜನೆ ಅರ್ಜಿ ಆಹ್ವಾನ

ಮೈಸೂರು,ಮೇ.3 : ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯನ್ನು ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ  ಪ್ರತಿ ತಿಂಗಳ ಮೂರು ಸಾವಿರ ಪಿಂಚಣಿ ಯೋಜನೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ದಿನಗೂಲಿ ಕಾರ್ಮಿಕರಾದ ಗಾರೆ, ಪೇಯಿಂಟ್, ಎಲೆಕ್ಟ್ರಿಷಿಯನ್, ಟೈಲ್ಸ್ ಕೆಲಸ ಮಾಡುವರು, ಪತ್ರಿಕಾ ವಿತರಕರು, ಮರಗೆಲಸ, ತರಕಾರಿ ಮಾರುವವರು, ಹೂ ವ್ಯಾಪಾರ  ಮಾಡುವವರು, ಮನೆಗೆಲಸ, ಬೀದಿ ವ್ಯಾಪಾರಿಗಳು, ಮೂಟೆ ಹೊರುವವರು, ಕೆತ್ತನೆ, ಶಿಲ್ಪಿ, ಸವಿತ ಸಮಾಜ, ವಿಶ್ವಕರ್ಮ, ಕುಂಬಾರರು, ಲಾರಿ, ಟೆಂಟೋ, ಆಟೋ ಡ್ರೈವರ್ ಸೇರಿದಂತೆ ಇನ್ನಿತರ ಅಸಂಘಟಿತರು ಅರ್ಜಿ ಸಲ್ಲಿಸಬಹುದಾಗಿದೆ.

ವಿವರಗಳಿಗೆ ಕರ್ನಾಟಕ ರಾಜ್ಯ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘ, #31,1ನೇ ಮಹಡಿ, ಆರ್.ಎಂ.ಪಿ ಕಾಲೋನಿ ಹತ್ತಿರ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ. ಮೈಸೂರು-570023 ಇಲ್ಲಿ ಸಂಪರ್ಕಿಸಬಹುದಾಗಿದೆ.ದೂ.ಸಂ. 0821 4191266 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: