ಸುದ್ದಿ ಸಂಕ್ಷಿಪ್ತ

ಮೇ.5ರಂದು ಶ್ರೀಮಹಾಂತ ಸ್ವಾಮಿಗಳ ಸಂಸ್ಮರಣೆ : ಗದ್ದುಗೆ ಉದ್ಘಾಟನೆ

ಮೈಸೂರು,ಮೇ.3 : ವರುಣ ಹೋಬಳಿಯ ದಂಡಿಕೆರೆಯ ದಂಡಿಕೆರೆ ಮಹಾಂತಸ್ವಾಮಿ ಮಠಾಧ್ಯಕ್ಷ ವಿದ್ವಾನ್ ಮಹಾಂತ ಸ್ವಾಮಿಗಳ ಸಂಸ್ಮರಣೆ ಹಾಗು ಗದ್ದುಗೆ ಉದ್ಘಾಟನಾ ಸಮಾರಂಭವನ್ನು ಮೇ.5ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಶ್ರೀಶಿವರಾತ್ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸುವರು, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಉದ್ಘಾಟಿಸುವರು, ಕನಕಪುರ ದೇಗುಲಮಠದ ಡಾ.ಶ್ರೀ ಮುಮ್ಮಡಿನಿರ್ವಾಣ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು, ದೇವನೂರು ದಾಸೋಹ ಮಠದ ಶ್ರೀ ಮಹಾಂತ ಸ್ವಾಮಿ, ಮಲ್ಲನಮೂಲೆ ಕಂಬಳೀಶ್ವರ ಮಠದ ಶ್ರೀ ಚನ್ನಬಸವಸ್ವಾಮಿಗಳು ಇರುವರು. ಮೈವಿವಿ ಪ್ರಾ.ವಿ.ಸಂ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ನುಡಿ ನಮನ ಸಲ್ಲಿಸುವರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಬಿಜೆಪಿ ಮುಖಂಡ ಕಾ.ಪು.ಸಿದ್ದಲಿಂಗಸ್ವಾಮಿ, ಅಭಿಷೇಕ್ ಎಸ್.ಮಣಿಗಾರ್. ಇನ್ನಿತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: