ಮನರಂಜನೆ

ತೆಲುಗಿಗೆ ದೊಡ್ಮನೆ ಹುಡುಗ

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸೆಪೆಕ್ಟೆಡ್ ಮೂವಿ ದೊಡ್ಮನೆ ಹುಡುಗ ಸಿನಿಮಾ ಇದೇ ತಿಂಗಳ 30 ಕ್ಕೆ ಬಿಡುಗಡೆಯಾಗಲಿದೆ. ಅಪ್ಪು ಅಭಿಮಾನಿಗಳಿಗೆ ಇದು ಖುಷಿ ಕೊಡುವ ಸಂಗತಿ. ಈಗ ಸದ್ಯ ದೊಡ್ಮನೆ ಕ್ಯಾಂಪಿನಿಂದ ಬಂದಿರುವ ಮತ್ತೊಂದು ಹಾಟ್ ಸುದ್ದಿ ಏನಪ್ಪ ಎಂದರೆ ಈ ಸಿನಿಮಾ ಟಾಲಿವುಡ್‌ಗೆ ರಿಮೇಕ್ ಆಗಲಿದೆ ಎನ್ನುವುದು.

ಹೌದು ದೊಡ್ಮನೆ ಹುಡುಗ ತೆಲುಗಿಗೆ ರಿಮೇಕ್ ಆಗಲಿದೆ ಎನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿದೆ. ತೆಲುಗಿನಲ್ಲಿ ಪುನೀತ್‌ರಾಜ್‌ಕುಮಾರ್ ನಿರ್ವಹಿಸಿದ ಪಾತ್ರವನ್ನು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಿರ್ವಹಿಸುತ್ತಾರೆ. ಅಂಬರೀಷ್ ಮಾಡಿದ ಪಾತ್ರವನ್ನು ಮೆಗಾಸ್ಟಾರ್ ಚಿರಂಜೀವಿ  ನಿರ್ವಹಿಸುತ್ತಾರೆ ಎಂಬ ಸುದ್ದಿ ಹರಡಿದೆ. ಸೂರಿ ಮತ್ತು ಪುನೀತ್‌ರಾಜ್‌ಕುಮಾರ್ ಅವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೂರನೇ ಚಿತ್ರ, ಅಂಬರೀಷ್, ಸುಮಲತಾ, ಭಾರತಿ ವಿಷ್ಣುವರ್ಧನ್ ಅಭಿನಯದ ಮಲ್ಟಿಸ್ಟಾರ್ ಸಿನಿಮಾ ಇದಾಗಿದೆ. ಒಟ್ಟಿನಲ್ಲಿ  ಬಿಡುಗಡೆಗೆ ಮುನ್ನವೆ ಚಿತ್ರ ಸಾಕಷ್ಟು ಸುದ್ದಿ ಮಾಡಿದ್ದು ಬಿಡುಗಡೆಗಾಗಿ ಅಪ್ಪು ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Reply

comments

Related Articles

error: