ಸುದ್ದಿ ಸಂಕ್ಷಿಪ್ತ

ಮೇ.5ರಂದು ಕಸಾಪ 105ನೇ ಸಂಸ್ಥಾಪನಾ ದಿನಾಚರಣೆ : ಕವಿಗೋಷ್ಠಿ

ಮೈಸೂರು,ಮೇ.3 ಜಿಲ್ಲಾ ಕಸಾಪ ದಿಂದ ಕ.ಸಾ.ಪ 105ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿ ಗೀತ ಗಾಯನವನ್ನು ಮೇ.5ರ ಬೆಳಗ್ಗೆ 10.30ಕ್ಕೆ ವಿಜಯನಗರದ 1ನೇ ಹಂತದ ಜಿಲ್ಲಾ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಉದ್ಘಾಟಿಸುವರು, ಜಿ.ಕ.ಸಾ.ಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್ ಉಪನ್ಯಾಸ ನೀಡುವರು, ಕೆ.ರಘುರಾಂ ವಾಜಪೇಯಿ ಇರುವರು. ಕವಿ ಡಾ.ಜಯಪ್ಪ ಹೊನ್ನಾಳಿ ಕವಿಗೋಷ್ಠಿ ನೇತೃತ್ವ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: