ಪ್ರಮುಖ ಸುದ್ದಿ

ಶ್ರೀನಾರಾಯಣ ಧರ್ಮ ಪರಿಪಾಲನಾ ಯೋಗಂ : ಮಡಿಕೇರಿ ಶಾಖೆಯಿಂದ ಸಂತ್ರಸ್ತರಿಗೆ ಪರಿಹಾರ ವಿತರಣೆ

ರಾಜ್ಯ(ಮಡಿಕೇರಿ) ಮೇ 4 : – ಶ್ರೀನಾರಾಯಣ ಧರ್ಮ ಪರಿಪಾಲನಾ ಯೋಗಂ ಮಡಿಕೇರಿ ಶಾಖೆ ವತಿಯಿಂದ ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ವಿತರಣಾ ಕಾರ್ಯಕ್ರಮ ನಡೆಯಿತು.
ಲೆಕ್ಕ ಪರಿಶೋಧಕ ಹಾಗೂ ಸಂಘದ ಸದಸ್ಯ ಟಿ.ಕೆ.ಸುಧೀರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಕಷ್ಟ, ದು:ಖಗಳು ಬರುವುದು ಸಾಮಾನ್ಯ. ಯಾವುದೇ ಸಂಕಷ್ಟಕ್ಕೂ ಕುಗ್ಗದೆ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಸಾಧಿಸುವ ಛಲವೊಂದಿದ್ದರೆ ಯಶಸ್ಸು ಗಳಿಸಲು ಸಾಧ್ಯ ಎಂದರು. ಪ್ರಕೃತಿಗೆ ಕೋಪ ಬರಲು ಮಾನವರೇ ಕಾರಣ, ಅರಣ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕಾಗಿದೆ. ಆ ಮೂಲಕ ಭೂಮಿಯ ರಕ್ಷಣೆಗೆ ಎಲ್ಲರೂ ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದರು.
ನಗರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭ ಎಲ್ಲಾ ಸಂಘಟನೆಗಳು ಒಗ್ಗೂಡಿ ಜಾತಿ, ಮತ, ಬೇಧವಿಲ್ಲದೆ ಕಾರ್ಯಾಚರಣೆ ನಡೆಸಬೇಕು. ಅತಿವೃಷ್ಟಿ ಹಾನಿಯಂತಹ ಕರಾಳ ದಿನಗಳು ಮರುಕಳಿಸದಿರಲಿ ಎಂದರು.
ಈ ಸಂದರ್ಭ ಪ್ರಕೃತಿ ವಿಕೋಪಕ್ಕೆ ತುತ್ತಾದ ಮಕ್ಕಂದೂರು ಗ್ರಾಮದ 9 ಸಂತ್ರಸ್ತರಿಗೆ ತಲಾ 5 ಸಾವಿರ ರೂ. ಗಳಂತೆ ಒಟ್ಟು 45 ಸಾವಿರ ಪರಿಹಾರ ಚೆಕ್ ವಿತರಿಸಲಾಯಿತು. ಅಲ್ಲದೆ ಮಡಿಕೇರಿ ಸಹಕಾರ ಪಟ್ಟಣ ಬ್ಯಾಂಕ್ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ ಹಾಗೂ ನಿರ್ದೇಕ ಆರ್.ಗಿರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಮಡಿಕೇರಿ ಶಾಖೆ ಅಧ್ಯಕ್ಷ ಟಿ.ಆರ್.ವಾಸುದೇವ, ಉಪಾಧ್ಯಕ್ಷ ಮಾಧವನ್, ಸಂಘದ ಹಿರಿಯರಾದ ರಾಜಮ್ಮ ಮತ್ತಿತರ ಪ್ರಮುಖರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: