ಮೈಸೂರು

ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ‌ ಶ್ರದ್ಧಾಂಜಲಿ ಅರ್ಪಣೆ

ಮೈಸೂರು, ಮೇ.4:-  ಕರ್ನಾಟಕ ರಂಗಭೂಮಿಯ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ‌ ಇಟ್ಟಿಗೆಗೂಡಿನಲ್ಲಿರುವ ಕಛೇರಿಯಲ್ಲಿ  ನಿನ್ನೆ ಸಂತಾಪ ಸಭೆ “ಮಾಸ್ಟರ್ ವಿದಾಯ” ಶ್ರದ್ದಾಂಜಲಿ ಸಲ್ಲಿಸಲಾಯಿತು,

ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್   ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ನಂತರ ಬ್ರಾಹ್ಮಣ ಮುಖಂಡರು ಹಾಗೂ ಪದಾಧಿಕಾರಿಗಳು ಮೌನಾಚರಿಸಿದರು., ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್    ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವದಲ್ಲಿ ರಾಜಕೀಯ ವಿಡಂಬನೆ ಟೀಕೆಗಳ ಮೂಲಕ ಸಾಮಾಜಿಕ ನಾಟಕ ಪ್ರದರ್ಶಿಸಿ ಸಮಾಜವನ್ನು ತಿದ್ದಿ ತೀಡುತ್ತಿದ್ದರು, ಪೌರಾಣಿಕ ಐತಿಹಾಸಿಕ ನಾಟಕದ ನಂತರ ಸಾಮಾಜಿಕ ನಾಟಕದ ಮೂಲಕ ಪ್ರತಿಯೊಬ್ಬರ ಗಮನ ಸೆಳೆದ ವ್ಯಕ್ತಿಯೇ ನಾಟಕರತ್ನ ಮಾಸ್ಟರ್ ಹಿರಣ್ಣಯ್ಯ, ಹಿರಣ್ಣಯ್ಯರವರು ಮೂಲತಃ ಮೈಸೂರಿನವರು  ಕೆ ಹಿರಣ್ಣಯ್ಯ ಮಿತ್ರಮಂಡಳಿ ವತಿಯಿಂದ ಲಂಚಾವತಾರ ನಾಟಕ 11ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ, ಕರ್ನಾಟಕದ ಎಲ್ಲಾ ಸಭಾಂಗಣದಲ್ಲೂ ಜನಭರಿತ ಪ್ರದರ್ಶನ ನೀಡಿದ್ದಾರೆ, ನಾಟಕದ ಮೂಲಕ ಭ್ರಷ್ಟ ರಾಜಕಾರಣಿಗಳ ಭ್ರಷ್ಟಾಧಿಕಾರಿಗಳ   ಬಣ್ಣವನ್ನು ಬಯಲು ಮಾಡಿ ಜನಸಾಮಾನ್ಯರನ್ನು ಜಾಗೃತಿ ಮಾಡುತ್ತಿದ್ದರು. ನೂರಾರು ಸಹಾಯಾರ್ಥ ಪ್ರದರ್ಶನವನ್ನು ನೀಡಿದ್ದಾರೆ. ಕಳೆದ 4ದಶಕಗಳ ಹಿಂದೆ ಬ್ರಾಹ್ಮಣರು ಮುಖ್ಯವಾಹಿನಿಗೆ ಬರುವುದು ಬಹಳ ಕಷ್ಟಕರವಾಗಿತ್ತು. ಆದರೆ ಹಿರಣ್ಣಯ್ಯ ನವರು ಎದೆತಟ್ಟಿ ನಾನೊಬ್ಬ ಬ್ರಾಹ್ಮಣನೆಂದು ಹೇಳುತ್ತಿದ್ದರು. ಬ್ರಾಹ್ಮಣ ಸಮುದಾಯದ ಅಗ್ರಸಂಸ್ಥೆ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಸಂಸ್ಥಾಪಕ ಅಧ್ಯಕ್ಷರಾಗಿ ಪ್ರತಿಯೊಂದು ಜಿಲ್ಲೆಯಲ್ಲೂ ಬ್ರಾಹ್ಮಣ ಸಂಘವನ್ನು ಸಂಘಟಿಸಿದ್ದಾರೆ, ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ,   ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ಅವರ ಪ್ರಮುಖ ನಾಟಕ ಪ್ರದರ್ಶನಗಳು ಕಣಗಾಲ್ ಪ್ರಭಾಕರ್ ಶಾಸ್ತ್ರಿ   ಸಾಹಿತ್ಯ ಬರೆಯುತ್ತಿದ್ದರು,  ಮುಖ್ಯಮಂತ್ರಿಯಾಗಿದ್ದ ಗುಂಡೂರಾಯರು ಸಹ ನಾಟಕ ವೀಕ್ಷಿಸಲು ಬರುತ್ತಿದ್ದರು, ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು ಕಂಠೀರವ ರತ್ನ ಎಂದು ಹಿರಣ್ಣಯ್ಯರವರಿಗೆ ಬಿರುದು ಕೊಟ್ಟು ಸನ್ಮಾನಿಸಿದ್ದರು.   ಇಂತಹ ಮಹಾನ್ ವ್ಯಕ್ತಿ ಸಾಂಸ್ಕೃತಿಕ ಲೋಕಕ್ಕೆ ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಆದರೆ ರಾಜ್ಯ ಸರ್ಕಾರ ಇವರು ನಿಧನರಾದಾಗ ಸರ್ಕಾರಿ ಗೌರವ ನೀಡದಿರುವುದು ನೋವಿನ ಸಂಗತಿ. ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಬೆಂಗಳೂರಿನ ಜಿಲ್ಲಾಡಳಿತಕ್ಕೆ ಸರ್ಕಾರಿ ಗೌರವ ಸೂಚಿಸಲು ಆದೇಶ ನೀಡಬಹುದಿತ್ತು, ಡಾ. ವಿಷ್ಣುವರ್ಧನ   ನಿಧನರಾದ ಮೇಲೆ ಸ್ಮಾರಕ ಇಲ್ಲಿಯವೆರೆಗೂ ನಿರ್ಮಾಣವಾಗಿಲ್ಲ.  ಈಗ ಹಿರಣ್ಣಯ್ಯ ಅವರಿಗೆ ಸರ್ಕಾರಿ ಗೌರವ ಸೂಚಿಸದಿರುವುದರ ಹಿಂದಿನ ಕಾರಣ ಬ್ರಾಹ್ಮಣ ಎಂದು ತುಳಿತ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಹಾಗಾಗಿ ಮುಂದಿನ ದಿನದಲ್ಲಿ  ಹಿರಣ್ಣಯ್ಯ ಅವರ ರಂಗಭೂಮಿ ಸೇವೆಯನ್ನು ಪರಿಗಣಿಸಿ, ಮುಂದಿನ ದಿನದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ಸೇವೆಯನ್ನು ಯುವಪೀಳಿಗೆಗೆ  ಶಾಶ್ವತವಾಗಿ ತಿಳಿಸಲು ಪ್ರಮುಖ ರಸ್ತೆಗೆ ನಾಮಕರಿಸಬೇಕು ಮತ್ತು ಕರ್ನಾಟಕ ನಾಟಕ ಪರಿಷತ್ ವತಿಯಿಂದ  ಯೋಜನೆಗಳನ್ನು ರೂಪಿಸಿ  ಯುವರಂಗಕರ್ಮಿಗಳನ್ನು ಮುಖ್ಯವಾಹಿನಿಗೆ ತರಬೇಕು ಎಂದರು.

ಬ್ರಾಹ್ಮಣ ಗ್ರಾಮಾಂತರ ಸಂಘದ ಅಧ್ಯಕ್ಷ ಗೋಪಾಲ್ ರಾವ್, ಮಾಜಿ ನಗರಪಾಲಿಕೆ ಸದಸ್ಯ ಪಾರ್ಥಸಾರಥಿ, ಹರೀಶ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ಮಂಜುನಾಥ್, ಹವ್ಯಕ ಸಂಘದ ಅಧ್ಯಕ್ಷ ಎಲ್.ಎನ್ ಹೆಗ್ಡೆ, ಅಪೂರ್ವ ಸುರೇಶ್, ಲತಾ ಬಾಲಕೃಷ್ಣ, ಬ್ರಹ್ಮಣ್ಯತೀರ್ಥ, ಕಡಕೊಳ ಜಗದೀಶ್, ಚಕ್ರಪಾಣಿ, ಸುಚೀಂದ್ರ, ಜಯಸಿಂಹ, ವಿಜಯ್ ಕುಮಾರ್, ರಂಗನಾಥ್, ಶಂಕರ್ ರಾಜ್, ಸುಬ್ರಹ್ಮಣ್ಯ, ಪ್ರಶಾಂತ್,  ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: