ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕುಲವಧು ಖ್ಯಾತಿಯ ನಟಿ ದೀಪಿಕಾ

ಬೆಂಗಳೂರು,ಮೇ 4-ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯ ನಟಿ ಧನ್ಯಾ ಖ್ಯಾತಿಯ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಈ ವಿಚಾರವನ್ನು ದೀಪಿಕಾ ಇನ್ ಸ್ಟಾಗ್ರಾಮ್ ನಲ್ಲಿ ಖಚಿತಪಡಿಸಿದ್ದಾರೆ. ನಟ ಅಕ್ಕು ಆಕರ್ಷ್ ಅವರನ್ನು ದೀಪಿಕಾ ಅವರು ವಿವಾಹವಾಗುತ್ತಿದ್ದಾರೆ.

ನನ್ನ ಗೆಳೆಯನ ಜೊತೆ ಇದು ನಮ್ಮ ಮೊದಲ ಪೋಸ್ಟ್. ಏಳೇಳು ಜನ್ಮದಲ್ಲೂ ಏಳು ಹೆಜ್ಜೆ ಹಾಕುವುದು ಇವರ ಜೊತೆಯೇ ಎಂದು ದೀಪಿಕಾ ತಮ್ಮ ಹುಡುಗನನ್ನ ಪರಿಚಯ ಮಾಡಿದ್ದಾರೆ. ನಟಿ ದೀಪಿಕಾ ಅವರು ತಮ್ಮ ಭಾವಿ ಪತಿಯ ಅಕ್ಕು ಆಕರ್ಷ್ ಅವರ ಪೇಯಿಂಟ್ ಶೈಲಿಯಲ್ಲಿ ಇರುವ ಫೋಟೋವನ್ನ ಪೋಸ್ಟ್ ಮಾಡಿ, ಇವರೇ ನಾನು ಮದುವೆಯಾಗಲಿರುವ ಹುಡುಗ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಮೊದಲ ಪೋಸ್ಟ್ ನಲ್ಲಿ ಇಬ್ಬರು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿರುವ ದೀಪಿಕಾ ಇನ್ನೊಂದು ಪೋಸ್ಟ್ ನಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ‘ನೀನು ನನಗೆ ಪ್ರತಿದಿನದ ಸೂರ್ಯ ಇದ್ದಂತೆ. ನನ್ನ ಹೃದಯ ನಿನಗೆ ಸೋತಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.

ಇಬ್ಬರು ಮದುವೆಯಾಗುತ್ತಿರುವುದನ್ನು ಬಹಿರಂಗ ಪಡಿಸಿರುವ ದೀಪಿಕಾ ಮದುವೆ ದಿನಾಂಕವನ್ನು ಬಹಿರಂಗ ಪಡಿಸಿಲ್ಲ. (ಎಂ.ಎನ್)

Leave a Reply

comments

Related Articles

error: