ಸುದ್ದಿ ಸಂಕ್ಷಿಪ್ತ

ಎರಡು ದಿನಗಳ ಕಾಲ ‘ಸೂಪ್ತ ಮನಸ್ಸು’ ಕಾರ್ಯಾಗಾರ

ಮೈಸೂರು,ಮೇ.4 : ಮಾನಸ ಸಲಹಾ ಮತ್ತು ಸಮ್ಮೋಹನ ಚಿಕಿತ್ಸಾ ಕೇಂದ್ರದಿಂದ ಮೇ.11 ಮತ್ತು 12ರಂದು ಸೂಪ್ತ ಮನಸ್ಸಿನ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಮನಸ್ಸಿನ ಖಿನ್ನತೆ, ನಿದ್ರಾಹೀನತೆ, ಆತ್ಮವಿಶ್ವಾಸ ವೃದ್ಧಿ, ಜ್ಞಾನಪಶಕ್ತಿ ವೃದ್ಧಿ, ಒತ್ತಡ ಮತ್ತು ಆತಂಕ ನಿರ್ವಹಣೆ ಬಗ್ಗೆ, ಭಯ ಮತ್ತು ತಿರಸ್ಕಾರ, ರಕ್ತದೊತ್ತಡ, ನೋವು ನಿವಾರಣಾ, ಕೌಟುಂಬಿಕ ಸಮಸ್ಯೆಗಳು, ಪೂರ್ವಜನ್ಮ ವೃತ್ತಾಂತ ಬಗ್ಗೆ ತಿಳಿಸಲಾಗುವುದು.

ಶಿಬಿರವು ಇಡಬ್ಲುಎಸ್.150, 1ನೇ ಹಂತ, 3ನೇ ಅಡ್ಡ ರಸ್ತೆ, ಸತ್ವಬೋಧಿ ಪಾರ್ಕ್ ಎದುರು ಕುವೆಂಪುನಗರ, ಮೈಸೂರು-570023 ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: