ಮನರಂಜನೆ

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಬದ್ಮಾಶ್

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಬದ್ಮಾಶ್. ಸ್ಪೆಷಲ್ ಸ್ಟಾರ್ ಧನಂಜಯ ಕುಡ್ಲದ ಬೆಡಗಿ ಸಂಚಿತಾ ಶೆಟ್ಟಿ ಅಭಿನಯದ ಈ ಚಿತ್ರ ಆರಂಭಿಕ ಹಂತದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಚಿತ್ರದ ಟ್ರೈಲರ್ ನೋಡಿದ ಬಾಲಿವುಡ್ ಸುಲ್ತಾನ್, ಸಲ್ಮಾನ್ ಖಾನ್ ಇಂಪ್ರೆಸ್ ಆಗಿದ್ದರು. ಸಲ್ಲು ಈ ಚಿತ್ರವನ್ನು ಹಿಂದಿಯಲ್ಲಿ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆ ನಂತರ ಆಡಿಯೋ ಬಿಡುಗಡೆಯಾಗಿ ಹಾಡುಗಳು ಎಲ್ಲೆಡೆ ಸಾಕಷ್ಟು ಫೇಮಸ್ ಆಗಿ ಸಿನಿಮಾ ಗ್ಯಾರೆಂಟಿ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಮೂಡಿಸಿದೆ.

ಇದೀಗ ಸೆನ್ಸಾರ್ ಅಂಗಳದಿಂದ ಹೊರಬಂದಿರುವ ಬದ್ಮಾಶ್, ಯು ಸರ್ಟಿಫಿಕೆಟ್ ಪಡೆದುಕೊಂಡಿದೆ. ನವ ನಿರ್ದೇಶಕ ಆಕಾಶ್ ಶ್ರೀವತ್ಸ್ ಅವರು ಮಾಸ್ ಕಥೆಯೊಂದಿಗೆ ಲವ್ ಸೆಂಟಿಮೆಂಟ್ ಬೆರಸಿ ಕಥೆ ರಚಿಸಿದ್ದಾರೆ ಎನ್ನುವುದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾತು. ಇನ್ನು ಈ ಸಿನಿಮಾ ಮೂಲಕ ಸ್ಪೆಷಲ್ ಸ್ಟಾರ್ ಧನಂಜಯ ಅವರಿಗೆ ಒಂದು ಹೊಸ ಇಮೇಜ್ ಸೃಷ್ಟಿಯಾಗಲಿದೆಯೆಂತೆ. ಇತ್ತೀಚೆಗೆ ಧನಂಜಯ ಅವರ ಹುಟ್ಟಿದ ಹಬ್ಬದ ದಿನ ಬಿಡುಗಡೆಯಾದ ಹಾಡೊಂದು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಷ್ಟೆಲ್ಲಾ ಸುದ್ದಿಯಲ್ಲಿರುವ ಬದ್ಮಾಶ್, ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಇದೆ. ನಾಯಕ ನಟ ಧನಂಜಯ ಅರಸೀಕೆರೆ ಹುಡುಗನಾದರೂ ಓದಿದ್ದು ಮತ್ತು ಸಿನಿಮ ನಾಯಕನಾಗಬೇಕು ಎಂಬ ಆಸೆ ಚಿಗುರೊಡೆದಿದ್ದು ಮೈಸೂರಿನಲ್ಲೇ. ಹಾಗಾಗಿ ಮೈಸೂರಿನೊಂದಿಗೆ ಸ್ಪೆಷಲ್ ಸ್ಟಾರ್‌ಗೆ ವಿಶೇಷ ನಂಟಿದೆ. ಈ ಚಿತ್ರದ ನಾಯಕನಟಿ ಸಂಚಿತಾ ಶೆಟ್ಟಿ ಕನ್ನಡದವರಾದರೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ. ಅವರಿಗೆ ‘ಬದ್ಮಾಶ್’ ಮೂಲಕ ಕನ್ನಡದಲ್ಲಿ ಇನ್ನಷ್ಟು ಸಿನಿಮಾಗಳು ಸಿಕ್ಕಿ ಕನ್ನಡದಲ್ಲೆ ನೆಲೆಸುವ ಆಸೆಯಿದೆ. ಒಟ್ಟಿನಲ್ಲಿ ‘ಬದ್ಮಾಶ್’ ಸಿನಿಮಾ ಗಾಂಧಿನಗರದ ಎಕ್ಸೆಪೆಕ್ಟೆಡ್ ಮೂವಿಯಾಗಿದೆ.

badmaash-movie-01

Leave a Reply

comments

Related Articles

error: