ದೇಶವಿದೇಶ

ಶ್ರೀಲಂಕಾದಲ್ಲಿ ಭಾರತ ಮೂಲದ ಪತ್ರಕರ್ತನ ಬಂಧನ

ಕೊಲಂಬೋ (ಮೇ 4): ಶ್ರೀಲಂಕಾದ ಕೊಲೊಂಬೋದಲ್ಲಿ ಈಸ್ಟರ್‌ ಭಾನುವಾರದಂದು ಚರ್ಚ್ ಹಾಗೂ ಹೋಟೆಲ್‌ಗಳ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಶಾಲೆಯೊಂದಕ್ಕೆ ಅನಧಿಕೃತವಾಗಿ ಹೋಗಲು ಯತ್ನಿಸುತ್ತಿದ್ದ ಭಾರತ ಮೂಲದ ಪತ್ರಕರ್ತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಪತ್ರಕರ್ತನನ್ನು ಭಾರತದ ದೆಹಲಿ ಮೂಲದ ಸಿದ್ದಿಕ್ ಅಹ್ಮದ್ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಇವರು ನ್ಯೂಸ್ ಏಜೆನ್ಸಿಯೊಂದರಲ್ಲಿ ಫೋಟೊ ಜರ್ನಲಿಸ್ಟ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಿದ್ದಿಕ್ ಅಹ್ಮದ್ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಆದ ಪರಿಣಾಮದ ಬಗ್ಗೆ ವರದಿ ಮಾಡಲು ಹೋಗಿದ್ದರು.

ಸೇಂಟ್ ಸೆಬಾಸ್ಟಿಯಾನ್ ಚರ್ಚ್‍ನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಅಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯಲು ಶಾಲೆಗೆ ಹೋಗಿದ್ದಾರೆ. ಆ ಶಾಲೆಗೆ ಹೋಗಲು ಅನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಶಾಲೆಗೆ ಪ್ರವೇಶ ಬಯಸಿದ ಕಾರಣ ಶ್ರೀಲಂಕಾ ಪೊಲೀಸರು ಸಿದ್ದಿಕ್ ನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. (ಎನ್.ಬಿ)

Leave a Reply

comments

Related Articles

error: