ಸುದ್ದಿ ಸಂಕ್ಷಿಪ್ತ

ಬಸ್ ಸೌಕರ್ಯ : ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲು ಮೇ 10 ಕೊನೆ ದಿನ

ರಾಜ್ಯ(ಮಡಿಕೇರಿ) ಮೇ 4 :- ಕೊಡಗು ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಯೋಗ್ಯವಾದ ರಸ್ತೆ ಹೊಂದಿರುವ ಎಲ್ಲಾ ಹಳ್ಳಿಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಲು ಹಾಗೂ ಪ್ರಸ್ತುತ ಇರುವ ಸೌಲಭ್ಯವನ್ನು ಅಭಿವೃದ್ದಿಪಡಿಸಲು ಉದ್ದೇಶಿಸಿದ್ದು, ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಕ.ರಾ.ರ.ಸಾ. ಸಂಸ್ಥೆ ಬಸ್ ಸೌಕರ್ಯ ಕಲ್ಪಿಸಲು ಮುಂದಾಗಿದೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕ ಪ್ರಯಾಣಿಕರು, ಸರಕು ಸಾಗಾಣಿಕ ವಾಹನಗಳು ಹಾಗೂ ಟ್ರಾಕ್ಟರ್ ಟ್ರೈಲರ್ ಮುಂತಾದ ವಾಹನಗಳಲ್ಲಿ, ಅನಧಿಕೃತವಾಗಿ ಪ್ರಯಾಣಿಸುವುದನ್ನು ತಪ್ಪಿಸಲು ಅಗತ್ಯವಿರುವ ಬಸ್‍ಗಳ ಸಮೀಕ್ಷೆ ನಡೆಸಿ ಪ್ರಸ್ತಾವನೆಯನ್ನು ಕ.ರಾ.ರ.ಸಾ. ಸಂಸ್ಥೆಯ ಅಧಿಕಾರಿಗಳಿಗೆ ಕಳುಹಿಸಲು ಉದ್ದೇಶಿಸಲಾಗಿದೆ.
ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು, ಸಂಘ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಸ್ಥಳೀಯ ಇಲಾಖಾಧಿಕಾರಿಗಳು ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಉತ್ತಮಪಡಿಸಲು ಯಾವ ಗ್ರಾಮದಿಂದ ಯಾವ ಪಟ್ಟಣಕ್ಕೆ, ಯಾವ ಮಾರ್ಗದಲ್ಲಿ, ಯಾವ ಸಮಯಕ್ಕೆ ಬಸ್ ಸೌಕರ್ಯದ ಅವಶ್ಯಕತೆ ಇದೆ ಎಂಬುವುದನ್ನು ಲಿಖಿತ ಮನವಿ ಮೂಲಕ ಅಥವಾ ಅಂಚೆ ಕಾರ್ಡ್‍ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಮಡಿಕೇರಿ ಅಥವಾ ಕಚೇರಿಗೆ ಮೇ, 10 ರೊಳಗೆ ಕಳುಹಿಸಿಕೊಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-2298785 ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: